ಬಳ್ಳಾರಿಯಲ್ಲಿ ಗಣಿ ಉದ್ಯಮಿ ಮತ್ತು ಮಾಧ್ಯಮ ಪ್ರತಿನಿಧಿ ಮೇಲೆ ಭೀಕರ ಹಲ್ಲೆ ನಡೆದು ಎಂಟು ದಿನ ಸಂದಿದೆ.ಅಕ್ರಮ ಗಣಿಗಾರಿಕೆ ವಿರುದ್ದ ಧ್ವನಿಯೆತ್ತಿದಕ್ಕೆ ನಡೆದ ಹಲ್ಲೆಯಿದು.ಹಲ್ಲೆ ನಡೆಸಿದವರ ಮಾಹಿತಿಗಳು ಪೊಲೀಸ್ರಿಗೆ ದೊರೆತಿವೆ ಎನ್ನಲಾಗಿದೆ.ಆದ್ರೂ ತನಿಖೆ ಕಿಂಚಿತ್ತೂ ಪ್ರಗತಿಯಾಗಿಲ್ಲ. ಹಲ್ಲೆ ನಡೆದ ಬಳ್ಳಾರಿಯ ಪಾರ್ವತಿನಗರದ ಡಬ್ಬಲ್ ರೋಡ್ನಲ್ಲಿರುವ ಸಾಧನಾ ಬೇಕರಿಗೆ ಪೂರ್ವ ವಲಯದ ಐಜಿಪಿ ಭೇಟಿ ನೀಡಿದ್ರು.ಜೊತೆಗೆ ಬಳ್ಳಾರಿ ಎಸ್.ಪಿ.ಸೀಮಂತ್ ಕುಮಾರ್ ಸಿಂಗ್ ಸಹ ಇದ್ರು.ಮಾಹಿತಿಗಳನ್ನ ಸಂಗ್ರಹಿಸಿದ ಬಳಿಕ ಐಜಿಪಿ ಸತ್ಯನಾರಾಯಣ ರಾವ್,ಎಸ್.ಪಿ.ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ರು.ಆಗ ಅವ್ರು ಹೇಳಿದ್ದು “ಇದೊಂದು ಸಿಲ್ಲಿ ಪ್ರಕರಣ”ಹಾಡುಹಗಲೇ ನಡೆದ ಕೊಲೆ ಯತ್ನದ ಹಲ್ಲೆ ಇವ್ರ ದೃಷ್ಟಿಯಲ್ಲಿ ಸಿಲ್ಲಿ.ಆದ್ರಿಂದ್ಲೇ ತನಿಖೆಯ ಹೆಜ್ಜೆಗಳು ಕ್ರಮಿಸಿಲ್ಲವೇ ಐಜಿಪಿಯವ್ರೇ…?ಇದು ಬಳ್ಳಾರಿಗರ ಸ್ಥೈರ್ಯ ಕುಗ್ಗಿಸುತ್ತದೆ ಎಂಬುದನ್ನು ಮರೆತಿರೇಕೆ….? 

No comments:
Post a Comment