ಪ್ರಜಾವಾಣಿಯ ರಾಮನ್, ಸುಧಾದ ಅಜಾದ್ ಮತ್ತು ಫ್ಯಾಂಟಮ್ ಓದುತ್ತಿದ್ದ ನಾನು ಬಹುಬೇಗ ಕರ್ನಾಟಕ ಪತ್ರಿಕೋದ್ಯಮದ ಫ್ಯಾಂಟಮ್ ಲಂಕೇಶ್ ಅವರ ಬರವಣಿಗೆಗೆ ದಾಟಿಕೊಂಡೆ. ಕಾಂಗ್ರೆಸ್ ಸರಕಾರ ಉರುಳಲು ಲಂಕೇಶ್ ಪತ್ರಿಕೆಯೂ ಕಾರಣ ಎಂಬುದು ನನಗೆ ಚೆನ್ನಾಗಿ ನೆನಪಿದೆ.
ಲಂಕೇಶರ ಬರವಣಿಗೆ ಓದುತ್ತಾ ಬೆಳೆದ ನಾನು ಬಹಳ ನಿಷ್ಠುರ ಸ್ವಭಾವದವನೆಂದು ಕುಟುಂಬ ಮತ್ತು ಅತ್ಯಾಪ್ತ ಸ್ನೇಹಿತರ ಪ್ರೀತಿಯ ಆರೋಪ. ಇದಕ್ಕೆ ನನ್ನ ಓದು ಕಾರಣವೆಂದು ನನ್ನ ಅಣ್ಣನಿಗೆ ಅರ್ಥವಾಗಿತ್ತು. ಲಂಕೇಶರ ಟೀಕೆ-ಟಿಪ್ಪಣಿ, ಮರೆಯುವ ಮುನ್ನ, ನೀಲು ಮತ್ತು ರವೀಂದ್ರ ರೇಷ್ಮೇ ಅವರ ಬರಹಗಳು ಚೆನ್ನಾಗಿ ನೆನಪಿವೆ. ರೇವಜಿತು ಮತ್ತು ಬಾಟ್ಲಿಂಗ್ ಹಗರಣ ಜನತಾ ಪಕ್ಷದ ಸರಕಾರವನ್ನು ಇಕ್ಕಟಿಗೆ ಮತ್ತು ಮುಜುಗರಕ್ಕೆ ಸಿಲುಕಿಸಿತು. ನನ್ನ ಪ್ರಕಾರ ಅಂದಿನ ರಾಜಕಾರಣಿಗಳು ಹೆದರಿ-ಬೆವರುವ ಹಾಗೆ ಬರೆಯುತ್ತಿದ್ದವರು ಲಂಕೇಶ್ ಮತ್ತು ಅವರ ವರದಿಗಾರು.

ಪತ್ರಿಕೋದ್ಯಮವೆಂದರೆ ಗುಮಾಸ್ತಗಿರಿಯಲ್ಲ ಎಂಬುದನ್ನು ಲಂಕೇಶ್ ಪತ್ರಿಕೆ ತೋರಿಸುತ್ತಿತ್ತು. ವಿಶೇಷ ತನಿಖಾ ವರದಿಗಳನ್ನು ಲಂಕೇಶ್ ಪತ್ರಿಕೆಯಲ್ಲಿಯಷ್ಟೇ ಓದಬಹುದಾಗಿತ್ತು. ಪತ್ರಿಕೆಯಲ್ಲಿ ಯಾರೇ ರಾಜಕಾರಣಿ-ಅಧಿಕಾರಿ ಬಗ್ಗೆ ನಕಾರಾತ್ಮಕ ಬರವಣಿಗೆ ಬಂದರೆ ಅಂಥವರ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು. ಲಂಕೇಶ್ ಮತ್ತು ಪತ್ರಿಕೆಗೆ ಭ್ರಷ್ಟರು ಹೆದರುತ್ತಿದ್ದರು. , ಕಾಂಗ್ರೆಸ್ ಮತ್ತು ಜನತಾ ಪಕ್ಷದ ಸರಕಾರಗಳಿಗೆ, ಅವುಗಳ ಮುಖ್ಯಮಂತ್ರಿಗಳಿಗೆ ಕಿವಿ ಹಿಂಡಿ ಬುದ್ದಿ ಹೇಳುವ ತಾಕತ್ತು ಅವರಿಗಷ್ಟೆ ಇತ್ತು.
ನಜೀರ್ ಸಾಬ್ ಅವರಂಥ ಕಡು ಪ್ರಾಮಾಣಿಕರನ್ನು ಪ್ರೋತ್ಸಾಹಿಸುತ್ತಾ, ಭ್ರಷ್ಟ ರಾಜಕಾರಣಿ-ಅಧಿಕಾರಿಗಳು ಬೆವರುವಂತೆ ಮಾಡುತ್ತಿದ್ದ ಲಂಕೇಶ್ ಪ್ರಸ್ತುತ ಇರಬೇಕಿತ್ತು. ಗಣಿ ಲೂಟಿಯನ್ನು, ಆಪರೇಷನ್ ಕಮಲವನ್ನು ತಮ್ಮದೇ ಕಟು ರೀತಿಯಲ್ಲಿ ಖಂಡಿಸುತ್ತಿದ್ದರು. ಭ್ರಷ್ಟರ ವಿರುದ್ದ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸಕ್ರಿಯ ಹೋರಾಟಕ್ಕೂ ಇಳಿಯುತ್ತಿದ್ದರು.
ಕರ್ನಾಟಕದ ಜನರಲ್ಲಿ ರಾಜಕೀಯ ಶಿಕ್ಷಣ ಮೂಡಿಸಿದ ಮತ್ತು ಮಾಧ್ಯಮವೆಂದರೆ ಚಲನಶೀಲ ಎಂಬುದನ್ನು ಮನವರಿಕೆ ಮಾಡಿದ ಲಂಕೇಶರೇ ನೀವಿನ್ನೂ ಇರಬೇಕಿತ್ತು.

No comments:
Post a Comment