ಅನ್ಯಾಯವಾಗಿ ಕೇರಳಕ್ಕೆ ಸೇರಿರುವ ಕಾಸರಗೋಡಿನ ಕನ್ನಡಿಗರ ಮೂಗಿನವರೆಗೂ ಮಲೆಯಾಳಿ ಮುಳುಗು ನೀರು ಬಂದಿದೆ. ಇದನ್ನು ಪ್ರತಿಭಟಿಸದಿದ್ದರೆ ಇಲ್ಲಿ ಕನ್ನಡ ಸಂಪೂರ್ಣ ಮುಳುಗಿ ಹೋಗುತ್ತದೆ ಎಂದು ಅಲ್ಲಿನ ಕನ್ನಡಿಗರು ಅರಿತಿದ್ದಾರೆ. ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ. ಈ ಕುರಿತ ವಿವರಕ್ಕೆ ತೆರಳುವ ಮುನ್ನ ಕೆಲ ದಿನಗಳ ಹಿಂದೆ 'ಸಂಕಥೆ' ಯಲ್ಲಿ ಪ್ರಕಟವಾದ ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ…!? ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ. ಕಾಸರಗೋಡು ನಿವಾಸಿಗಳ ನೋವು ವ್ಯಕ್ತವಾಗಿದೆ. ಇದಲ್ಲದೆ ಸಮಸ್ಯೆಯ ತಳಸ್ಪರ್ಶಿ ಅರಿವು ಇಲ್ಲದವರು ನೀಡಿದ ಅಭಿಪ್ರಾಯಗಳಿವೆ
Anand Shetty said...
1.ಇನ್ನಾದರೂ ಕನ್ನಡಿಗರೆಲ್ಲ ಎಚ್ಚೆತ್ತುಕೊಳ್ಳಬೇಕು, ನಮ್ಮ ಸರ್ಕಾರವು ಎಚ್ಚೆತ್ತುಕೊಂಡು ಸ್ವಲ್ಪ ಗಮನಹರಿಸಬೇಕಿದೆ.
2. ಮಲಯಾಳ ಭಾಷೆ, ಸಾಹಿತ್ಯದ ಬಗ್ಗೆ ನನಗೆ ಗೌರವವಿದೆ. ಕಾಸರಗೋಡಿನ ಹಳೆಯ ತಲೆಮಾರಿನ ಮತ್ತು ಇಂದಿನ ಹಲವರು ಸ್ಥಳೀಯ ಮಲಯಾಳಿಗಳು ಇಲ್ಲಿನ ತುಳು ಕನ್ನಡ ಮೊದಲಾದ ಸ್ಥಳೀಯ ಸಾಂಸ್ಕೃತಿಕ ವೈವಿಧ್ಯವನ್ನು ಗೌರವಿಸುತ್ತಾರೆ.ಆದರೆ ವಲಸೆ ಬಂದ ಬರುತ್ತಿರುವ ತೆಂಕಣದ ಮಲಯಾಳಿಗಳಿಗೆ ಕಾಸರಗೋಡಿನ ಬಗ್ಗೆ ಪ್ರೀತಿ ಇಲ್ಲ.ಇಲ್ಲಿನ ಭಾಷಾ ಸಾಮರಸ್ಯವನ್ನು ನಾಶ ಮಾಡುವವರು ಅವರೇ .ಇವರಲ್ಲಿ ಭಾಷಾಂಧ ಅಧಿಕಾರಿಗಳು ಸ್ಥಳೀಯ ಭಾಷೆ ಸಂಸ್ಕೃತಿಗಳನ್ನು ಕೀಳಾಗಿ ಕಾಣುತ್ತಾರೆ.ಸ್ತಳೀಯ ಭಾಷೆಗಳನ್ನು ಕಲಿಯುವುದೂ ಇಲ್ಲ.ಮಲಯಾಳದ ಬಲಾತ್ಕಾರ ಹೇರಿಕೆಯಿಂದ ಕನ್ನಡಕ್ಕೆ ಮಾತ್ರ ಅಪಾಯ ಅಲ್ಲ.ಕಾಸರಗೋಡನ್ನು ಕಳೆದು ಕೊಂಡರೆ ಕರ್ನಾಟಕದ ಕನ್ನಡಿಗರಿಗಿಂತಲೂ ತುಳುವರಿಗೆ ಹೆಚ್ಚು ನಸ್ಟ. ಚಂದ್ರಗಿರಿ ನದಿಯಾಚೆ ತುಳು ಕೊಂಕಣಿ ಭಾಷೆಗಳು ಮಲಯಾಳದ ಪ್ರಭಾವದಿಂದ ಹೆಚ್ಚು ಕಡಿಮೆ ಅಳಿದು ಹೋಗಿವೆ.ಕನ್ನಡ ಪ್ರಭಾವವಿರುವ ಉತ್ತರ ಕಾಸರಗೋಡು, ಮಂಜೇಶ್ವರ ದಕ್ಷಿಣ ಕನ್ನಡ ಉಡುಪಿಗಳಲ್ಲಿ ತುಳು ವ್ಯಾವಹಾರಿಕವಾಗಿ ಉಳಿದಿದೆ. ಮಲಯಾಳ ಪರ್ಥೆನಿಯಂ ಗಿಡದ ಹಾಗೆ. ಅದು ಇರುವಲ್ಲಿ ಬೇರೆ ಭಾಷೆಗಳು ಮರೆಯಾಗುತ್ತವೆ. ತೆಂಕಣದ ಮಲಯಾಳಿಗಳು ಇತರ ಭಾಷೆ ಕಲಿಯುವುದಿಲ್ಲ.ಇತರ ಸಂಸ್ಕೃತಿಗಳ ಜತೆ ಹೊಂದಾಣಿಕೆ ಇರದ ಹಟಮಾರಿಗಳು. ಕಾಸರಗೋಡಿನ ಬಹುಭಾಷೆ ಸಾಂಸ್ಕೃತಿಕ ವೈವಿಧ್ಯ ಜಾನಪದ ಐತಿಹ್ಯ ವಿಶಿಸ್ತತೆ ನಾಶವಾಗಲು ಇನ್ನು ಹೆಚ್ಚು ಕಾಲ ಬೇಡ.ತುಳು ಅಕಾಡಮಿ ಒಂದು ಮೋಸ ಮತ್ತು ಕನ್ನಡಿಗ-ತುಳುವರನ್ನು ಒಡೆಯುವ ತಂತ್ರ.ಇದೀಗ ಉರ್ದು, ಕನ್ನಡ ಕೊಂಕಣಿ ಅಕಾಡಮಿ ಗಳಿಗೆ ಬೇಡಿಕೆ ಬರುತ್ತಿದೆ. ಅಕಾಡಮಿ ಗಳಿಂದ ಸಾಮಾನ್ಯ ಕನ್ನಡಿಗ ತುಳು ಕೊಂಕಣಿ ಉರ್ದು ಭಾಷಿಗರ ಕನ್ನಡ ಕಲಿತವರ ಶೈಕ್ಷಣಿಕ ಔದ್ಯೋಗಿಕ ವ್ಯಾವಹಾರಿಕ ಸಮಸ್ಯೆಗಳು ಬಗೆಹರಿಯುವುದಿಲ್ಲ.ಮಲಯಾಳ ಹೇರಿಕೆಯಿಂದ ಕನ್ನಡ ಶಾಲೆಗಳು ಕನ್ನಡ ಕಲಿತವರ ಉದ್ಯೋಗಾವಕಾಶ ಕ್ರಮೇಣ ಕೊನೆಗೊಳ್ಳುತ್ತದೆ.ವಿದ್ಯರ್ತಿಗಳಿಗೆ ಸಮಸ್ಯೆಯಾಗುತ್ತದೆ. ಕನ್ನಡ ಶಾಲೆಗಳಿಗೆ ಕನ್ನಡದ ಗಂಧಗಾಳಿ ಇಲ್ಲದ ಅಧ್ಯಾಪಕರನ್ನು ನೆಮಿಸುತ್ತಿರುವ ಕೇರಳ ಸರಕಾರ ಕನ್ನಡ ಶಾಲೆಗಳನ್ನು ನಿರ್ನಾಮ ಮಾಡಲು ಸಂಚು ಹೂಡಿದೆ
ರಾಕೇಶ್ ಶೆಟ್ಟಿ said...
3. ಏಕಿಕರಣ ಹೋರಾಟದಲ್ಲಿ ಮೂಚೂಂಣಿಯಲ್ಲಿದ್ದ ಕಾಸರಗೋಡು ಕನ್ನಡಿಗರ ನೋವು ಈಗ ಅರಣ್ಯ ರೋದನವಾಗಿದೆ.ಇದೀಗ ಯಾವ ಕನ್ನಡ ಸಂಘಟನೆಗಳಿಗೂ ಬೇಡವಾದ ವಿಷಯವಾಗಿದೆ. ಕಾಸರಗೋಡಿನ ಕನ್ನಡಿಗರ ನೋವಿಗೆ ದನಿಯಾಗಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ...
ಕಲರವ said...
4.kannada para kalakali, kalakaiyaage vuliyuvudeno.. emba bhidiyu kaaduttide.nimma kaalajige nammadu daniyide.abhinandanegalu.
ಮೌನಿ said...
5. ಯಾರು ಈ ಕಥೆಗೆ ಕಿವಿಗೊಡುವವರು ? ಯಾರು ಹೆರಿಗೆಬೇನೆಗೆ ಹೆಗಲುಕೊಡುವವರು ? ಯಾರು ಈ ಎದೆಬಾವಿಗೆ ಎದೆಕೊಡುವವರು ?ಯಾರು ಕನ್ನಡಕ್ಕೆ ಕೈ ಎತ್ತುವವರು ? ಯಾರು ಕನ್ನಡಕ್ಕೆ ಕಟಿಬದ್ಧರಾಗುವವರು ?ದರಿದ್ರ ರಾಜಕಾರಣಿಗಳು, ಹೊಲಸು ಬಿಳಿಧಾರಿಗಳು,,,!!??
6. Kasaragod is part of Kerala now, You have to learn Malayalam, But it is upto you u want to keep kannada culture or not !! If I respect other's mother, then only my mother will get respect !! Jai Karnataka Maathe..
7. ನಾವೆಲ್ಲರೂ ಭಾರತ ದೇಶದಲ್ಲಿದ್ದೇವೆ.ನಮ್ಮಲ್ಲಿ ಎಷ್ಟು ಮಂದಿ ಹಿಂದೀ ಕಲಿಯುತ್ತೇವೆ ಅಥವಾ ಅದರಲ್ಲಿ ವ್ಯವಹರಿಸುತ್ತೇವೆ? ನಮ್ಮ ಬದುಕನ್ನು ಹಿಂದೀ ಬಾಧಿಸುತ್ತಿಲ್ಲ ಅಲ್ಲವೇ? ಹಾಗಿದ್ದ ಮೇಲೆ ನಾವು ಕಾಸರಗೊಡಿಗರು ನಮ್ಮದಲ್ಲದ ತಪ್ಪಿಗೆ ಕೇರಳಕ್ಕೆ ಸೇರಿದ ಮಾತ್ರಕ್ಕೆ ಮಲಯಾಳವನ್ನು ಕಡ್ಡಾಯವಾಗಿ ಯಾಕೆ ಕಲಿಯಬೇಕು? ನಾವು ಇಲ್ಲಿಗೆ ವಲಸೆ ಬಂದವರಲ್ಲ.ಪ್ರಜಾವಾಣಿಯಲ್ಲಿ ವೈದೇಹಿಯವರು ಬರೆದ ಭಾನುವಾರದ ಅಂಕಣ ದಯವಿಟ್ಟು ಗಮನಿಸಿ.ಬೆಲ್ಜಿಯಂ ನಂತಹ ಬಹುಭಾಷ ಸಂಸ್ಕೃತಿಯ ದೇಶಗಳಲ್ಲಿ ಎಲ್ಲ ಭಾಷೆಗಳಲ್ಲೂ ವ್ಯವಹರಿಸಬಹುದಾದ ಅವಕಾಶವಿದೆ. ನಮ್ಮಲ್ಲಿ ಎಲ್ಲ ಧರ್ಮದವರಿಗೆ ಅವರವರ ಅಚಾರ ವಿಚಾರಗಳೊಂದಿಗೆ ಬದುಕುವ ಹಕ್ಕಿದೆ. ಹಿಂದೂ ಗಳು ಬಹುಸಂಖ್ಯಾತರೆಂದು ಅವರ ನೀತಿ ನಿಯಮಗಳನ್ನು ಅಲ್ಪಸಂಖ್ಯಾತ ಧರ್ಮದವರ ಮೇಲೆ ಹೆರುವ ಹಾಗಿಲ್ಲ. ನಮ್ಮನ್ನೂ ನಮ್ಮ ಭಾಷೆ ಸಂಸ್ಕೃತಿ ಗಳೊಂದಿಗೆ ಬದುಕಲು ಬಿಡಿ.ಕಾಸರಗೋಡಿನಲ್ಲಿ ಸ್ಥಳನಾಮಗಳನ್ನೂ ಕನ್ನಡಿಗರ ಹೆಸರನ್ನೂ ಕೂಡ ಮಲಯಾಲೀಕರಿಸುತ್ತಿದ್ದಾರೆ. ಇಲ್ಲಿನ ಮಲಯಾಳಿಗಳಿಗೆ ಕನ್ನಡಿಗರನ್ನು ಕಂಡರೆ ಎಷ್ಟು ಅಸಡ್ಡೆ ಎಂದರೆ ಕನ್ನಡಿಗರ ಬಗ್ಗೆ ಒಂದು ವಾರ್ತೆಯನ್ನೂ ಮಲಯಾಳ ಮಾಧ್ಯಮದವರು ಪ್ರಕಟಿಸುವುದಿಲ್ಲ.ಕರ್ನಾಟಕ ದವರಿಗೂ ನಾವು ಹೊರಗಿನವರು! ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮಾತನಾಡುತ್ತೇವೆ.ಎಲ್ಲ ಸಣ್ಣ ಪುಟ್ಟ ಭಾಷಾ ವೈವಿಧ್ಯಗಳನ್ನೂ ಉಳಿಸುತ್ತಿದ್ದೇವೆ.ಆದ್ರೆ ಇಲ್ಲಿಗೆ ವಲಸೆ ಬರುವ ಮಲಯಾಳಿಗಳಿಗೆ ಕನ್ನಡ ತುಳು ಅಂದರೆ ತಾತ್ಸಾರ.IF I RESPECT OTHERS MOTHER ...ಎಂದು ಕಾಮೆಂಟ್ ಮಾಡಿದವರು ಯಾರನ್ನು ಉದ್ದೆಶಿಸಿದ್ದಾರೋ ಗೊತ್ತಿಲ್ಲ.ಕಾಸರಗೋಡು ಕನ್ನಡಿಗರಿಗೆ ಪರಭಾಷಾಸೌಹಾರ್ದದ ಪಾಠ ಯಾರೂ ಹೇಳಿಕೊಡಬೇಕಾಗಿಲ್ಲ. ನಾವು ಅಹಿಂಸಾತ್ಮಕವಾಗಿ ಹೋರಾಡುತ್ತಿದ್ದೇವೆ.ನೀವು ಕನ್ನಡಿಗರಾಗಿದ್ದರೆ ನಮ್ಮ ಸ್ಥಿತಿಯಲ್ಲಿ ನೀವಿದ್ದಿದ್ದರೆ ಇಲ್ಲಿ ಕನ್ನಡ ಉಳಿಸುವ ಕಷ್ಟ ಅರ್ಥವಾಗುತ್ತಿತ್ತು.
Anonymous said...
8. I really appreciate your comments, but if u look at belagaum (belagavi) people struggle for the same language issues. obviously they are marati people & still they learn Kannada & live in Kannada. For me Belagaum & Kasaragod are same. If my comments are hurted you , then m extremely sorry.
Regards,
Shr
Regards,
Shr
2 ಮತ್ತು 7ನೇ ಪ್ರತಿಕ್ರಿಯೆ ನೋಡಿದಾಗ ಕಾಸರಗೋಡಿನ ಕನ್ನಡಿಗರ ವೇದನೆ ನಮ್ಮ ಹೃದಯವನ್ನು ತಟ್ಟುತ್ತದೆ. ಅವರು ಧನ ಸಹಾಯ ಅಥವಾ ಮತ್ಯಾವುದೇ ಕ್ಷಣಿಕ ಸಹಾಯ ಕೋರುತ್ತಿಲ್ಲ. ‘ಕನ್ನಡವನ್ನು ಉಳಿಸಬೇಕಾಗಿದೆ’ ಎಂಬುದಷ್ಟೆ ಅವರ ಕೂಗು. ಇದು ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿ ಹೊಂದಿರುವ ಪ್ರತಿಯೊಬ್ಬರ ನಿರೀಕ್ಷೆಯೂ ಹೌದು.
6 ಮತ್ತು 8 ನೇ ಕಾಮೆಂಟುಗಳನ್ನು ಮಾಡಿದವರಿಗೆ ಸಮಸ್ಯೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇಲ್ಲ ಎಂತಲೇ ಹೇಳಬೇಕಾಗಿದೆ. ಕಾಸರಗೋಡಿನ ಸಮಸ್ಯೆಗೂ ಬೆಳಗಾವಿಗೂ ವ್ಯತ್ಯಾಸವಿದೆ. ಬೆಳಗಾವಿ ಕನ್ನಡಿಗರದು. ಕನ್ನಡ ನೆಲದಲ್ಲಿಯೇ ಇದೆ. ಇಲ್ಲಿ ಇರ ಬಯಸುವವರು ಕನ್ನಡ ಕಲಿಯಲೇಬೇಕು. ಆದರೆ ಕಾಸರಗೋಡಿನ ಕನ್ನಡಿಗರು ಮಲೆಯಾಳ ಕಲಿಯುವ ಅವಶ್ಯಕತೆಯಿಲ್ಲ. ಅದು ಕನ್ನಡ + ತುಳು ಭಾಷಾ ಸಂಸ್ಕೃತಿಯ ನೆಲ. ದಶಕಗಳ ಹಿಂದೆಯೇ ಇದನ್ನು ಕೇರಳ ಸರಕಾರ ಕೂಡ ತಾತ್ವಿಕವಾಗಿ ಒಪ್ಪಿದೆ. ಆದರೂ ಅದಕ್ಕೆ ಜಾಣ ಮರೆವು. ಕನ್ನಡ + ತುಳು ಭಾಷಾ ಸಂಸ್ಕೃತಿಯನ್ನು ಅಲ್ಲಿಂದ ನಿರ್ನಾಮ ಮಾಡುವ ಹಠ. ಇಂಥ ಹಠಮಾರಿತನ ನೆರವೇರಲು ಅವಕಾಶ ನೀಡದಂತೆ ಪ್ರತಿಭಟಿಸುವ ಅವಶ್ಯಕತೆಯಿದೆ. ಈ ಕೆಲಸವನ್ನು ಅಲ್ಲಿನ ಕನ್ನಡಿಗರು ಪುನರಾರಂಭಿಸಿದ್ದಾರೆ
ಆಗಸ್ಟ್ 3, 2011 ರಂದು ಕಾಸರಗೋಡಿನ ಕನ್ನಡಿಗರು ಬೃಹತ್ ಪ್ರತಿಭಟನಾ ಜಾಥಾ ಮತ್ತು ಧರಣಿ ಮೂಲಕ ಕೇರಳ ಸರಕಾರದ ಭಾಷಾ ಕುತಂತ್ರವನ್ನು ಖಂಡಿಸಿದರು.. ಯಾವುದೇ ಕಾರಣಕ್ಕೂ ಇಂಥ ಅನೀತಿ ಭಾಷಾ ಹೇರಿಕೆಗೆ ಅವಕಾಶ ನೀಡುವುದಿಲ್ಲ. ಕನ್ನಡಿಗರಿಂದ ಉಗ್ರ ಪ್ರತಿಭಟನೆ ಆರಂಭಕ್ಕೂ ಮುನ್ನ ‘ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯ ಕಲಿಕೆ’ ಆದೇಶ ಹಿಂಪಡೆಯಲು ಒತ್ತಾಯಿಸಿದರು.
‘ ಭಾಷಾ ಕಲಿಕೆಯ ನೆಪದಲ್ಲಿ ಕೇರಳ ಸರಕಾರ, ಕನ್ನಡವನ್ನು ತೆರೆಮರೆಯಲ್ಲಿ ಮುಗಿಸುವ ಸಂಚು ರೂಪಿಸಿದೆ. ಕಳೆದ ಎರಡು ದಶಕಗಳಿಂದ ಕನ್ನಡಿಗರು ಒಗ್ಗಟ್ಟು ಇಲ್ಲದೆ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕೇರಳ ಸರಕಾರದ ಮಲೆಯಾಳಿ ಕಡ್ಡಾಯ ಆದೇಶವನ್ನು ಪ್ರತಿಭಟಿಸಲು ಕನ್ನಡ ಸಂಘ ಸಂಸ್ಥೆಗಳು ಮುಂಚೂಣಿಗೆ ಬರಬೇಕು’ ಪ್ರತಿಭಟನಾ ಜಾಥಾ ಉದ್ದೇಶಿಸಿ ಮಾತನಾಡಿದ ಎನ್. ಕೆ. ಮೋಹನ್ ದಾಸ್ ಅವರ ಖಡಾಖಂಡಿತ ಮಾತಿದು. ಇವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಪ್ರತಿನಿಧಿ.
ಕಾಸರಗೋಡಿನ ಸರಕಾರಿ ಕಾಲೇಜಿನಿಂದ ಹೊರಟ ಮೆರವಣಿಗೆ ಹಾದಿ ಸಾಗಿದಂತೆಲ್ಲ ಹಿಗ್ಗುತ್ತಲೇ ಹೋಯಿತು. ಇದು ಅಲ್ಲಿನ ಕನ್ನಡಿಗರಲ್ಲಿ ಕೇರಳ ಸರಕಾರದ ಭಾಷಾ ಅನೀತಿ ವಿರುದ್ಧದ ಆಕ್ರೋಶವನ್ನು ವ್ಯಕ್ತಪಡಿಸುತ್ತಿತ್ತು. ಕಾಸರಗೋಡು ಕನ್ನಡಿಗರ ಹಿತರಕ್ಷಣಾ ಸಮಿತಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ, ಕೇರಳ ಸರಕಾರಿ ಕನ್ನಡ ನೌಕರರ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಅಪೂರ್ವ ಕಲಾವಿದರು, ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹರಂಗ ಬಳಗದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಧರಣಿ ಕುಳಿತು ಹೋರಾಟದ ಬಿಸಿಯನ್ನು ಕೇರಳ ಸರಕಾರಕ್ಕೆ ಮುಟ್ಟಿಸಿದರು. ಇದೇ ಸಂದರ್ಭದಲ್ಲಿ ಉಪ ಜಿಲ್ಲಾ ವಿದ್ಯಾಧಿಕಾರಿಗಳ ಕಚೇರಿಗಳಿಗೂ ಮುತ್ತಿಗೆ ಹಾಕಿ ಪ್ರತಿಭಟಿದ್ದು ವಿಶೇಷವಾಗಿತ್ತು.
ಇದೆಲ್ಲವನ್ನು ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ಕನ್ನಡಿಗರು ನೋಡಿತ್ತಾ, ಸುಮ್ಮನೆ ಕೂರುವುದು ಥರವಲ್ಲ. ‘ ಮಲೆಯಾಳ ಕಡ್ಡಾಯ’ ಆದೇಶವನ್ನು ಹಿಂತೆಗೆದುಕೊಳ್ಳಲು ಕೇರಳ ಸರಕಾರದ ಮೇಲೆ ಒತ್ತಡ ಹೇರುವಂತೆ ಕರ್ನಾಟಕ ಸರಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಅಥವಾ ಇಮೈಲ್ ಮೂಲಕ ನಮ್ಮ ದನಿಯನ್ನು ತಲುಪಿಸಬೇಕಾಗಿದೆ. ಅವರ ಇಮೈಲ್ cm@kar.nic.in, cs@karnataka.gov.in
No comments:
Post a Comment