'ದೇಗುಲದ ನೆಲ ಮಾಳಿಗೆ ‘ಬಿ’ ಕೊಠಡಿ ತೆರೆದರೆ ಆಪತ್ತು' ಎಂಬ ಭೀತಿ ಕೇರಳಿಗರಲ್ಲಿ ಉಂಟಾಗಿದೆ. ಅಲ್ಲಿ ನಿತ್ಯ ಇದೇ ಚರ್ಚೆ. ಇದರ ಬಗ್ಗೆ ವದಂತಿಗಳು ಹರುಡುತ್ತಿವೆ. ಕೊಠಡಿ ತೆರೆದರೆ ನಿಜಕ್ಕೂ ಕೆಡುಕೆ ಉಂಟಾಗುತ್ತದೆಯೇ…? ಇಡೀ ದೇಶದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಆ ಕೊಠಡಿಯಲ್ಲಿ ಇರುವುದಾದರೂ ಏನು….ಈ ನಿಟ್ಟಿನ ಮಾಹಿತಿ……
ತಿರುವನಂತಪುರಂ ಮುಖ್ಯ ದೇಗುಲದ ಕುರಿತು ಹಿಂದೆ ಇದೇ ಬ್ಲಾಗಿನಲ್ಲಿ Exclusive ಮಾಹಿತಿ ಪ್ರಕಟವಾಗಿದೆ. ಪ್ರಾಚೀನ ದೇಗುಲದಲ್ಲಿ ಚಿನ್ನ, ವಜ್ರ-ವೈಢೂರ್ಯ ದೊರೆಯುವುದು ತೀರ ಅಪರೂಪ-ಅಸಾಮಾನ್ಯ ಸಂಗತಿಯಲ್ಲ. ನನ್ನ ಪ್ರಕಾರ ಆ ಇಡೀ ದೇಗುಲದ ವಾಸ್ತು ವಿಜ್ಞಾನ-ಕುತೂಹಲಕಾರಿ ಅಂಶಗಳನ್ನು ತಿಳಿಸುವ ಅನಂತಶಯನ ಮಹಾತ್ಮೆ-ಇನ್ನಿತರ ಸಂಬಂಧಿತ ಗ್ರಂಥಗಳು ಅಧ್ಯಯನಾರ್ಹ. ಇದರಿಂದ ಮತ್ತಷ್ಟು ವಿಶೇಷ ಸಂಗತಿ ತಿಳಿಯುವ ಸಾಧ್ಯತೆ ಇದೆ.
ದೇಗುಲದ ನೆಲ ಮಾಳಿಗೆಯಲ್ಲಿ ‘ಅನಂತನ ಖಜಾನೆ’ ಇರುವುದು ತೀರ ಗೋಪ್ಯವಾದ ಸಂಗತಿಯಾಗಿರಲೇ ಇಲ್ಲ. ಪದ್ಮನಾಭ ದೇವಾಲಯದ ಚರಿತ್ರೆ ತಿಳಿಯದಿದ್ದರಷ್ಟೆ ಇದು ಬೆರಗಿನ ಸಂಗತಿ. 1931 ರಲ್ಲಿ ಟ್ರಾವೆಂಕೂರು ಸಂಸ್ಥಾನದ ಮಹಾರಾಜ ಬಲರಾಮ ವರ್ಮ ಅವರು ಖುದ್ದು ನಿಂತು ನೆಲ ಮಾಳಿಗೆ ಕೊಠಡಿಯೊಂದರ ಬಾಗಿಲು ತೆರೆಯಿಸಿದ್ದರು. ಅನೇಕ ವರ್ಷಗಳಿಂದ ತೆಗೆಯದೇ ಇದ್ದ ಕಾರಣ ಬೀಗ ತುಕ್ಕು ಹಿಡಿದಿತ್ತು. ಕೀಲಿ ಕೆಲಸ ಮಾಡದ ಕಾರಣ ಸತತ 2 ½ (ಎರಡೂವರೆ ಘಂಟೆ ಅವಧಿ ಪ್ರಯತ್ನದ ನಂತರ ಬೀಗ ಒಡೆದು ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಕಾರ್ಯಾಚರಣೆಯಲ್ಲಿ ತೊಡಗಿದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ದೇಗುಲದ ಮುಖ್ಯ ದ್ವಾರದ ಮುಂದೆ ಆಂಬುಲೆನ್ಸ್ ನಿಲ್ಲಿಸಿಕೊಂಡು ವೈದ್ಯರು ಸಜ್ಜಾಗಿದ್ದರು. ನೆಲ ಮಾಳಿಗೆಯಲ್ಲಿ ಭಾರಿ ಗಾತ್ರದ ಫ್ಲಡ್ ಲೈಟ್ಸ್ ಹಾಕಲಾಗಿತ್ತು. ಅಲ್ಲಿಗೆ ಹೋಗುವ ಪ್ರತಿಯೊಬ್ಬರ ಕೈಯಲ್ಲಿಯೂ ಶಕ್ತಿಶಾಲಿ ಟಾರ್ಚ್ ಇದ್ದವು. ವರ್ಷಾಂತರಗಳಿಂದ ಬಾಗಿಲು ತೆರೆಯದೇ ಇದ್ದರೆ ಕೆಟ್ಟ ಹವೆ ತುಂಬಿಕೊಳ್ಳುವ ಕಾರಣ ಅದನ್ನು ಹೊರ ಹಾಕಲು ಮುಂಚೆಯೇ ಫ್ಯಾನ್ ಗಳನ್ನು ಜೋಡಿಸುವ ತಂಡವನ್ನು ಅಲ್ಲಿಗೆ ಕಳುಯಿಸಲಾಗಿತ್ತು. ಪ್ರಯಾಸದಿಂದ ಬಾಗಿಲು ತೆರೆದಾಗ ಅಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ-ವಜ್ರ-ವೈಢೂರ್ಯಗಳ ಆಭರಣಗಳು, ಚಿನ್ನದ ನಾಣ್ಯಗಳು-ಪಾತ್ರೆಗಳು, ನಾಣ್ಯಗಳನ್ನು ಅಳವಡಿಸಿದ್ದ ಹಿತ್ತಾಳೆ ಎದೆ ಕವಚಗಳು ಇದ್ದವು. ಇದರಲ್ಲಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಮತ್ತೆ ಯಥಾ ಪ್ರಕಾರ ಬಾಗಿಲಿಗೆ ಬೀಗ ಹಾಕಿ ಮುದ್ರೆಯೊತ್ತಲಾಯಿತು. ಇದಕ್ಕೂ ಮುಂಚೆ ಅಂದರೆ 1908ರಲ್ಲಿಯೇ ನೆಲ ಮಾಳಿಗೆ ಕೊಠಡಿಗಳ ಬಾಗಿಲು ತೆರೆಯುವ ಪ್ರಯತ್ನ ಮಾಡಲಾಗಿತ್ತು. ಈ ಕುರಿತ ಕೆಲ ವಿಚಾರಗಳನ್ನು 1933 ರಲ್ಲಿ ತ್ರಿವೆಂಡ್ರಮ್ ನಲ್ಲಿ ಇದ್ದ ಎಮಿಲಿ ಗಿಲ್ ಕ್ರೈಸ್ಟ್ ಹಚ್ ಎನ್ನುವ ಮಹಿಳೆ ತಾವು ಬರೆದ ‘ ಟ್ರಾವೆಂಕೂರು; ಎ ಗೈಡ್ ಬುಕ್ ಫಾರ್ ದ ವಿಸಿಟರ್ಸ್’ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಸಂಗತಿ ಡಿಸೆಂಬರ್ 6, 1931ರ ಭಾನುವಾರದ ‘ದ ಹಿಂದೂ’ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ.
69 ವರ್ಷಗಳ ಹಿಂದೆ ಅಷ್ಟೆಲ್ಲ ಮುಂಜಾಗ್ರತೆ ವಹಿಸಿ ಬಾಗಿಲು ತೆರೆಯಲು ಕಾರಣ ದೇಗುಲದ ಆವರಣದಲ್ಲಿ ರಾತ್ರಿ ವೇಳೆ ಭಾರಿ ಗಾತ್ರದ ನಾಗರ ಹಾವುಗಳ ಸಂಚಾರವನ್ನು ‘ಅನಂತ ಪದ್ಮನಾಭನ ಅಂಗರಕ್ಷಕ ಪಡೆ’ ನೋಡಿದ್ದೇ ಆಗಿತ್ತು. 2011 ರ ಜೂನ್ 3 ರಿಂದ 7ರವರೆಗೆ ಕಾರ್ಯನಿಮಿತ್ತ ತಿರುವನಂತಪುರದಲ್ಲಿದ್ದೆ.( ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಸಂದರ್ಭದಿಂದ ಇಲ್ಲಿಯವರೆಗೂ ಅನೇಕ ಬಾರಿ ತಿರುವನಂತಪುರಂಗೆ ಭೇಟಿ ನೀಡಿದ್ದೇನೆ. ಹೋದಾಗಲೆಲ್ಲ ಈ ದೇಗುಲಕ್ಕೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ) ಅನಂತ ಪದ್ಮನಾಭನ ದೇಗುಲದ ಬಗ್ಗೆ ತೀವ್ರ ಕುತೂಹಲವಿರಿಸಿಕೊಂಡ ಕಾರಣ ನಿತ್ಯ ಬೆಳಿಗ್ಗೆ ದೇಗುಲಕ್ಕೆ ಹೋಗುತ್ತಿದ್ದೆ. ಎಲ್ಲಿ ಹೋದರೂ ಪತ್ರಕರ್ತ ಸ್ವಭಾವ. ಮಾಹಿತಿ ಸಂಗ್ರಹಣೆಯಲ್ಲಿ ತೊಡಗುತ್ತಿದ್ದೆ.
ರಾತ್ರಿ 9 ರಿಂದ ಬೆಳಗ್ಗಿನ ಜಾವ 2.30 ರವರೆಗೂ ಬಳಿಕ ಅಂಗರಕ್ಷಕ ಪಡೆ ಹೊರತು ಪಡಿಸಿ ಉಳಿದವರ್ಯಾರಿಗೂ ದೇಗುಲದ ಒಳಗೆ ಪ್ರವೇಶವಿಲ್ಲ. ಶತಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ರಿವಾಜು ಮತ್ತು ಭದ್ರತಾ ವ್ಯವಸ್ಥೆಯಿದು. ಇನ್ನೊಂದು ಕುತೂಹಲದ ವಿಷಯವೆಂದರೆ ಈ ಅವಧಿಯಲ್ಲಿ ಅಂಗರಕ್ಷಕ ಪಡೆ ಅವರ ಸಂವಾದ ನಡೆಯುವುದು ಕಣ್ಣು ಸನ್ನೆ-ಕೈ ಸನ್ನೆ ಮುಖಾಂತರವೇ. ಅನಗತ್ಯವಾಗಿ ಒಂದು ಮಾತನ್ನು ಅವರು ಆಡುವುದಿಲ್ಲ. ಕಣ್ಣೆವೆ ಮುಚ್ಚದೇ ದೇಗುಲವನ್ನು ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಇವರು ಈಗಲೂ ಭಾರಿ ಗಾತ್ರದ ನಾಗರ ಹಾವುಗಳು ದೇಗುಲದ ಒಳಾವರಣದಲ್ಲಿ ಸಂಚರಿಸುವುದನ್ನು ನೋಡಿದ್ದಾರೆ. ಆಗ ಅವುಗಳನ್ನು ಹಿಡಿಯುವ-ಬಡಿಯುವ ಪ್ರಯತ್ನ ಮಾಡಿಲ್ಲ-ಮಾಡುವುದೂ ಇಲ್ಲ. ಇವುಗಳಿಂದ ಯಾರಿಗೂ ತೊಂದರೆಯಾಗಿಲ್ಲ. ದೇಗುಲ ರಕ್ಷಿಸಲು ಇವುಗಳು ಸಹಾಯಕ ಎಂಬ ನಂಬಿಕೆ ಅವರಿಗೆ.
ಕೇರಳದ ನಿವೃತ್ತ ಐ.ಪಿ.ಎಸ್. ಅಧಿಕಾರಿ, ಹಾಲಿ ಸುಪ್ರೀಮ್ ಕೋರ್ಟಿನಲ್ಲಿ ವಕೀಲರಾಗಿರುವ ಟಿ.ಪಿ. ಸುಂದರ ರಾಜನ್ ಅವರು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿರದಿದ್ದರೆ ಅನಂತ ಭಂಡಾರ ಸಾರ್ವಜನಿಕ ಗಮನಕ್ಕೆ ಬರುತ್ತಲೇ ಇರಲಿಲ್ಲ. ದೇಗುಲ, ಅಲ್ಲಿಯ ಸಂಪತ್ತಿನ ನಿರ್ವಹಣೆ ಪಾರದರ್ಶಕವಾಗಿರಬೇಕು ಎಂದು ಇವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರಕಾರ ಇದರ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ಆದೇಶಿಸಿತ್ತು. ಇದನ್ನು ರಾಜ ಮನೆತನದ ಹಿರಿಯ ಮಾರ್ತಂಡ ವರ್ಮ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ 2011 ರ ಮೇ 2 ರಂದು ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ಅಜ್ಞೆ ನೀಡಿದ ಕೋರ್ಟ್, ದೇಗುಲದ ಸಮಸ್ತ ಸಂಪತ್ತಿನ ಲೆಕ್ಕ ಸಿದ್ದಪಡಿಸುವಂತೆ ಆದೇಶ ನೀಡಿತ್ತು. ಕೇರಳ ಹೈಕೋರ್ಟಿನ ನಿವೃತ್ತ ನ್ಯಾಮಮೂರ್ತಿಗಳಾದ ಎಂ.ಎನ್. ಕೃಷ್ಣನ್, ಕೆ.ಎಸ್. ರಾಜನ್, ಸೇರಿದಂತೆ ಏಳು ಮಂದಿ ಸಮಿತಿ ನೇಮಕ ಮಾಡಿದೆ. ಈ ಸಮಿತಿಯಲ್ಲಿ ರಾಜಮನೆತನದ ಮಾರ್ತಾಂಡ ವರ್ಮ ಕೂಡ ಇದ್ದಾರೆ. ಸಮೀಕ್ಷೆಗೆ ಅನುಕೂಲವಾಗುವಂತ ತಿರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಎಂ.ಎನ್. ಕೃಷ್ಣನ್ ಅವರಿಗೆ ನೀಡಿದೆ. 2011ರ ಜೂನ್ 27ರಂದು ಈ ಸಮಿತಿ ನ್ಯಾಯಮೂರ್ತಿಗಳು ಕಾರ್ಯಾರಂಭ ಮಾಡಿದರು. ತದ ನಂತರದ ಬೆಳವಣಿಗೆ ಎಲ್ಲರಿಗೂ ತಿಳಿದೇಯಿದೆ. 2011ರ ಜುಲೈ 6 ರಂದು ಸುಪ್ರೀಕೋರ್ಟ್ ಸಮಿತಿಯ ಯಾರೂ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಕಂಡು ಬಂದಿರುವ ಸಂಪತ್ತು ಮತ್ತು ’ಬಿ’ ಕೊಠಡಿ ಬಾಗಿಲು ತೆರೆಯುವ ಕಾರ್ಯಾಚರಣೆಯನ್ನೂ ಕಡ್ಡಾಯವಾಗಿ ಚಿತ್ರೀಕರಿಸಲು ತಿಳಿಸಿದೆ.

ನೆಲ ಮಾಳಿಗೆಯ ‘ಎ, ಸಿ. ಡಿ. ಇ, ಎಫ್. ಕೊಠಡಿಗಳ ವೀಕ್ಷಣೆ ಕಾರ್ಯ ಅಷ್ಟೆನೂ ಪ್ರಯಾಸವಿಲ್ಲದೇ ಮುಗಿದಿದೆ. ‘ಬಿ’ ಕೊಠಡಿ ನಿಗೂಢವಾಗಿ ಉಳಿದಿದೆ. ಉಳಿದೆಲ್ಲ ಕೊಠಡಿಗಳಿಗಿಂತ ಈ ಕೊಠಡಿಯನ್ನು ಅತಿ ಹೆಚ್ಚಿನ ಸುಭದ್ರತೆಯಿಂದ ನಿರ್ಮಿಸಲಾಗಿದೆ. ಕೊಠಡಿಯ ಉಕ್ಕಿನ ಬಾಗಿಲುಗಳಿಗೆ ಹಾಕಿರುವ ಬೀಗ ತಂತ್ರಜ್ಞಾನ ಅತ್ಯಂತ ಸಂಕೀರ್ಣವಾಗಿದೆ. ಇಂದಿನ ಆಧುನಿಕ ದುಬಾರಿ ಬೀಗಗಳಿಗೂ ಇದು ಸವಾಲೊಡ್ಡುತ್ತದೆ. ಭಾರಿ ಭೀತಿ-ಕುತೂಹಲ ಮೂಡಿಸಿರುವ ಈ ಕೊಠಡಿಯಲ್ಲಿ ಇರುವುದಾದರೂ ಏನು…? ಈ ಪ್ರಶ್ನೆ ಪದೇ ಪದೇ ಉದ್ಭವಿಸುತ್ತಲೇ ಇದೆ.
ಇಲ್ಲಿ ಉಳಿದ ಕೊಠಡಿಗಳಂತೆ ಧನ-ಕನಕ, ವಜ್ರ-ವೈಢೂರ್ಯ-ಮುತ್ತು-ರತ್ನ-ಪಚ್ಚೆ-ಹವಳಗಳು ಇರಬಹುದು. ಇವೆಲ್ಲಕ್ಕಿಂತ ಅತಿ ಮುಖ್ಯ ದಾಖಲಾತಿಗಳು ಅಲ್ಲಿ ಇವೆ. ಪ್ರಾಚೀನ ಕಾಲದ ತಾಳೆ ಗರಿಗಳಿವೆ. ಹಿಂದಿನ ರಾಜ-ಮಹಾರಾಜರ ಆದೇಶಗಳಿವೆ. ‘ಎತ್ತರ ಯೋಗಂ’ ಸಮಿತಿ ಕಾಲ ಘಟ್ಟದ ದಾಖಲಾತಿಗಳೂ ದೊರೆಯಬಹುದು. ಟ್ರಾವೆಂಕೂರು ರಾಜ ಮನೆತನ ಮತ್ತು ಇವರಿಗೂ ಹಿಂದಿನ ರಾಜ ಮನೆತನಗಳ ಸವಿವರಗಳು ಲಭ್ಯವಾಗಬಹುದು. ಇವೆಲ್ಲದರಿಂದ ಅತ್ಯಮೂಲ್ಯ-ಅಷ್ಟೆ ಕುತೂಹಲಕಾರಿ ಸಂಗತಿಗಳು ತಿಳಿಯಬಹುದು. ಯಾವುದೇ ತೊಡಕು ಉಂಟಾಗದಿದ್ದರೆ ಈ ಎಲ್ಲ ವಿಚಾರ ಜುಲೈ 8 ರ ರಾತ್ರಿಯೊಳಗೆ ತಿಳಿಯುವ ಸಾಧ್ಯತೆ ಇದೆ.
ಇಷ್ಟಕ್ಕೂ ಈ ಎಲ್ಲ ಸಂಪತ್ತನ್ನು ಇಲ್ಲಿರಿಸಲು ಇರುವ ಮುಖ್ಯ ಕಾರಣಗಳಲ್ಲಿ ಒಂದು; ಇವೆಲ್ಲ ಕೊಠಡಿಗಳು ನೀರು-ಬೆಂಕಿ ಮತ್ತು ಸ್ಫೋಟಕಗಳ ನಿರೋಧಕ......!

ಒಳ್ಳೆಯ ಮಾಹಿತಿ, ಸಂಶೋಧನೆ.
ReplyDeleteThanks for the write up.
ReplyDelete~ CheT
ಹೀಗೆ ಸಂಪತ್ತನ್ನು ಒಂದೆಡೆ ಕೊಳೆ ಹಾಕುವುದರಿಂದ ೇನು ಪ್ರಯೋಜನ ೆಂಬುದನ್ನು ಆ 'ಅನಂತ'ನೇ ಹೇಳಬೆಕು!
ReplyDeleteಒಳ್ಳೆಯ ಮಾಹಿತಿ.....ಕುಮಾರ ರೈತ....:))))
ReplyDeleteEven if there is a treasure out there .. better be not disclosed. Otherwise our bloody politicians and greedy people eat up that too (like the way it happened with Puttparti baba's treasure)
ReplyDeleteSri. Kumsr raitha, Mahithigagi anantha danyavadagalu, B kotadiya nigoodada bagge nanagoo ananthavada kuthoohala vide, adannu vishada padisi.
ReplyDeleteits very nice article.
ReplyDeleteThis comment has been removed by the author.
ReplyDeleteಇಂಥ ವಿಷಯಗಳನ್ನೇಲ್ಲ ಓದುತ್ತಿದ್ದರೆ, ಪ್ರಾಚೀನ ಭಾರತದಲ್ಲಿ ಮೆರೆದ ಅನೇಕ ರಾಜ ಮಹಾರಾಜರ ಮನೆತನಗಳ ಬಗ್ಗೆ ಮಾಹಿತಿಯನ್ನು ಕೆದುಕುತ್ತಾ ಹೋದರೆ, ಇನ್ನೂ ಎಷ್ಟು ಇಂಥ ಖಜಾನೆಗಳು ಸಿಗಬಹುದು ಅಲ್ಲವೇ...
ReplyDeleteಕೊಳಕು ರಾಜಕೀಯ ತುಂಬಿರುವಾಗ ಇಂಥ ಸಂಪತ್ತು ನಿಜವಾದ ನಿರ್ಗತಿಕರ, ದೇಶದ ಉದ್ಧಾರಕ್ಕೆ ಹೇಗೆ ತಾನೇ ನೆರವಾದೀತು..........
ಹಣ ಕಂಡರೆ ಹೆಣವೂ ಬಾಯಿ ಬಿಡುವ ಕಲಿಗಾಲವಿದು....... ಇಂಥ ಸಂಪತ್ತುಗಳಿಂದ ದೇಶ ಶ್ರೀಮಂತವಾದರೂ, ಬಡತನದಲ್ಲಿಯೇ ತೆವಳುತ್ತಿದೆ.
ಆ ಅನಂತಪದ್ಮನಾಭನೇ ಇದಕ್ಕೆ ದಾರಿ.............
Yochisabekaadantaha vichaara
ReplyDeleteolleya mahiti
ReplyDeleteಹೊಸ ಹೊಸ ವಿಷಯಗಳನ್ನು ಹೊತ್ತು ತಂದಿದ್ದೀರಿ. ಈ ತರಹದ ಮಾಹಿತಿ ನೀಡುವಿಕೆ ಹೀಗೆ ಮುಂದುವರೆಯಲಿ. ಬೆಸ್ಟ್ ಆಫ್ ಲಕ್ ಸರ್
ReplyDeleteತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು...
ReplyDeleteEe Maahiti Tumbaane Chanaagide... Thank U.... Sir..
ReplyDeletewhy not give curtesy to Hindu for your write up? vasrsa.sagar
ReplyDeleteಚೆನ್ನಾಗಿ ವಿವರಿಸಿದ್ದೀರಿ ಕುಮಾರ್. ಮಠ, ದೇಗುಲಗಳ ಗುಪ್ತ ಅಥವಾ ಗೌಪ್ಯನಿಧಿಯ ಬಗ್ಗೆ ನಮ್ಮಂಥ ಜನಸಾಮಾನ್ಯರಿಗೆ ಇರುವ ಕುತೂಹಲಕ್ಕೆ ಇನ್ನಷ್ಟು ಇಂಬು ಕೊಡುತ್ತದೆ ನಿಮ್ಮ ಲೇಖನ.
ReplyDelete@varsa sagar, ಪ್ರತಿಕ್ರಿಯಿಸಿರುವುದಕ್ಕೆ ಧನ್ಯವಾದ, ನನ್ನೆಲ್ಲ ಮಾಹಿತಿ ಮೂಲ ಹಿಂದೂ ಪತ್ರಿಕೆಯಲ್ಲ. ನನ್ನ ಹಿಂದಿನ ಎರಡು ಲೇಖನಗಳನ್ನು ದಯವಿಟ್ಟು ಗಮನಿಸಿ. ಪತ್ರಿಕೆಗಳಲ್ಲಿ ಈ ವಿವರಗಳು ಬರುವ ಮುಂಚೆಯೇ ಈ ಬ್ಲಾಗಿನಲ್ಲಿ ಸದರಿ ಲೇಖನಗಳು ಪ್ರಕಟವಾಗಿವೆ. 1931ರಲ್ಲಿ ದೇಗುಲದ ನೆಲ ಮಾಳಿಗೆ ತೆರೆಯಲ್ಪಟ್ಟಿಟ್ಟಿತ್ತು ಎನ್ನುವಾಗ 'ಹಿಂದೂ' ಪತ್ರಿಕೆಯ ಹೆಸರು ಪ್ರಸ್ತಾಪಿಸಲ್ಪಟ್ಟಿದೆ.
ReplyDeleteಈ ಲೇಖನದ ಮುಖ್ಯ ವಿಷಯವಾದ 'B' ಕೊಠಡಿಯಲ್ಲಿ ಏನಿದೆ ಎಂಬುದರ ತಿರುಳು ಎಲ್ಲಿಯೂ ಬಂದಿಲ್ಲ. ಇದನ್ನು ನಾನಾ ಮೂಲಗಳಿಂದ ಸಂಗ್ರಹಿಸಿ ಬರೆದಿದ್ದೇನೆ. ವಂದನೆಗಳೊಂದಿಗೆ
tumba chenaagide
ReplyDeleteತುಂಬ ಕುತೂಹಲಕಾರಿಯಾಗಿದೆ ವಿಷಯ. ಸಂಪತ್ತು ಇಲ್ಲಿಯವರೆಗೆ ಸುರಕ್ಷಿತವಾಗಿತ್ತು. ಬಾಗಿಲು ತೆರೆಯದೇ ಇರುವುದೇ ಒಳ್ಳೆಯದು. ನ್ಯಾಯಾಲಯ ಹಿಂದೂಗಳ ನಂಬಿಕೆಯನ್ನು ಗೌರವಿಸಬೇಕು.
ReplyDeleteYou have given good information to the people of India
ReplyDelete