ತನ್ನತ್ತ ಇಡೀ ಜಗತ್ತು ಆಶ್ಚರ್ಯದಿಂದ ತಿರುಗಿ ನೋಡುವಂತೆ ಮಾಡಿದ ಅನಂತ ಪದ್ಮನಾಭ ದೇಗುಲದಲ್ಲಿ ಅಪಾರ ಸಂಪತ್ತು ಇರುವ ಸಂಗತಿ ಅತಿ ಗೋಪ್ಯ ಆಗಿರಲಿಲ್ಲ. ರಾಜ ಮನೆತನದ ಹಾಲಿ ಸದಸ್ಯರಿಗೆ, ಅರ್ಚಕ ವೃಂದದ ಮುಖ್ಯಸ್ಥರಿಗೆ ಮತ್ತು ಅನಂತ ಪದ್ಮನಾಭನ ಅಂಗರಕ್ಷಕ ಪಡೆ ಮುಖ್ಯಸ್ಥರಿಗೆ ಇದರ ಸ್ಪಷ್ಟ ಅರಿವಿದೆ. ಅಧಿಕಾರ ಸ್ವೀಕರಿಸುವಾಗ ಮಾಡಿದ ರಹಸ್ಯ ಕಾಪಾಡುವ ವಚನಕ್ಕೆ ಇವರು ಬದ್ಧರು. ಇದರ ಜೊತೆಗೆ ಅಪಾರ ಸಂಪತ್ತನ್ನು ಪ್ರಾಣ ತೆತ್ತಾದರೂ ಉಳಿಸುವುದಕ್ಕೆ ಅನಂತ ಪದ್ಮನಾಭನ ಅಂಗರಕ್ಷಕ ಪಡೆ ಕಟಿಬದ್ಧ….!
ಇಲ್ಲಿ ಮೂರು ಸಾವಿರ ವರ್ಷಕ್ಕೂ ಹಿಂದಿನಿಂದಲೂ ಸಂಗ್ರಹಣೆಯಾಗುತ್ತಾ ಬಂದ ಸಂಪತ್ತಿದೆ. ಅನಂತ ಪದ್ಮನಾಭ ದೇಗುಲದ ಪಾರಂಪಾರಿಕ ಧರ್ಮದರ್ಶಿ ಮಂಡಳಿ ‘ಎತ್ತರ ಯೋಗಂ. ಈ 81/2 ಮಂದಿ ಸದಸ್ಯರಿದ್ದ ಸಮಿತಿ ದೇಗುಲ ನಿರ್ವಹಣೆಯನ್ನು ಅತ್ಯಂತ ಜತನದಿಂದ ನಿರ್ವಹಿಸುತ್ತಿತ್ತು. ದೇಗುಲಕ್ಕೆ ಬಂದ ಸಮಸ್ತ ಕಾಣಿಕೆಯ ಪ್ರತಿ ವಿವರವನ್ನೂ ನಮೂದಿಸಲಾಗುತ್ತಿತ್ತು. 1724ರಲ್ಲಿ ದೇಗುಲ ಪುನರ್ನಿರ್ಮಾಣ ಕಾರ್ಯವನ್ನೂ ಆರಂಭಿಸಿತು. 1729ರಲ್ಲಿ ಪಟ್ಟಕ್ಕೇರಿದ ದಕ್ಷ ಹಾಗೂ ಪ್ರಬಲ ದೊರೆ ಮಾರ್ತಾಂಡ ವರ್ಮ ದೇಗುಲ ನಿರ್ಮಾಣದಲ್ಲಿ ಕಾಳಜಿ ವಹಿಸುತ್ತಾರೆ. ಇದರಿಂದಾಗಿಯೇ ನಿರ್ಮಾಣ ಕಾರ್ಯ ತ್ವರಿತವಾಗಿ ಮುಗಿಯುತ್ತದೆ. ಈ ನಂತರ ‘ಎತ್ತರ ಯೋಗಂ’ ಸಮಿತಿ ಅಸಮಾಧಾನದ ನಡುವೆ ಸಮಿತಿಯನ್ನು ವಜಾಗೊಳಿಸಿ ಅನಂತ ಪದ್ಮನಾಭ ದೇಗುಲದ ನಿರ್ವಹಣೆಯನ್ನು ತಮ್ಮ ಆಡಳಿತದ ವ್ಯಾಪ್ತಿಗೆ ಒಳಪಡಿಸುತ್ತಾರೆ. ಖುದ್ದು ಮುತುವರ್ಜಿ ವಹಿಸುತ್ತಾರೆ. ಇದರಿಂದಾಗಿಯೇ ‘ಎತ್ತರ ಯೋಗಂ’ ಸಮಿತಿ ಕಾಲಘಟ್ಟದ ಕಾಳಜಿ, ಪ್ರಾಮಾಣಿಕತೆ ನಂತರವೂ ಮುಂದುವರಿಯುತ್ತದೆ. ರಾಜ ಮಾರ್ತಾಂಡ ವರ್ಮನ ನಂತರದ ಎಲ್ಲ ದೊರೆಗಳು ಇದೇ ಮುತುವರ್ಜಿ ವಹಿಸಿರುವುದು ಗಮನಾರ್ಹ. ಇದರಿಂದಾಗಿಯೇ ಅಪಾರ-ಅಮೂಲ್ಯ ಸಂಪತ್ತು ಸಂರಕ್ಷಣೆಯಾಗಿದೆ.
ರಾಜ ಮಾರ್ತಂಡ ವರ್ಮರು ಅರಮನೆ ಸಂಪತ್ತು ಸಹಿತವಾಗಿ ತಮ್ಮೆಲ್ಲ ರಾಜ್ಯಾಧಿಕಾರವನ್ನು ತಮ್ಮ ಮನೆ ದೇವರಾದ ಅನಂತ ಪದ್ಮನಾಭನಿಗೆ ಸಮರ್ಪಿಸಿದ್ದು (ಕ್ರಿಸ್ತ ಶಕ 1750)ಇಡೀ ಭರತ ಖಂಡದಲ್ಲಿಯೇ ಅತ್ಯಪೂರ್ವ ಘಟನೆ. ಈ ನಂತರ ಪದ್ಮನಾಭ ದಾಸರಾಗಿ ದೇವರ ಹೆಸರಿನಲ್ಲಿ ರಾಜ್ಯಭಾರ ನಡೆಯುತ್ತದೆ. ಇವರ ಪರಂಪರೆ ಇದನ್ನು ಪಾಲಿಸಿಕೊಂಡು ಬರುತ್ತದೆ.
ಭಕ್ತಾಧಿಗಳು, ಇತರೇ ಸಂಸ್ಥಾನದ ರಾಜರು ಕಾಣಿಕೆಯಾಗಿ ಕೊಟ್ಟಿದ್ದೆಲ್ಲ ದೇಗುಲ ದಾಖಲೆಯಲ್ಲಿ ನಮೂದಾಗಿ ವರ್ಷದ ನಿರ್ದಿಷ್ಟ ದಿನದಂದು ದೇಗುಲದ ನೆಲ ಮಾಳಿಗೆಯ ಕೊಠಡಿಗಳಿಗೆ ಜಮಾವಣೆಯಾಗುತ್ತಲೇ ಬಂದಿದೆ. ಇದನ್ನು ರಾಜ ಮನೆತನದ ಈಗಿರುವ ಮುಖ್ಯಸ್ಥರು ಪ್ರಾಮಾಣಿಕತೆಯಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. ಟ್ರಾವೆಂಕೂರು ಸಂಸ್ಥಾನಕ್ಕೆ ಬರ ಬಂದಿದ್ದ ಸಂದರ್ಭದಲ್ಲಿ ಮಾತ್ರ ದೇಗುಲ ಖಜಾನೆ ತೆರೆದು ಪಾರದರ್ಶಕವಾಗಿ ಅಗತ್ಯವಿರುವಷ್ಟು ಹಣ ಪ್ರಜಾ ಸಂರಕ್ಷಣೆಗಾಗಿ ಬಳಕೆಯಾಗಿದೆ. ಇಂಥ ನಿದರ್ಶನ ಬಹುಶಃ ಎರಡು ಬಾರಿ ಮಾತ್ರ ಕಾಣುತ್ತದೆ.
ದೇಗುಲದಲ್ಲಿರುವ ಅಪಾರ-ಅಮೂಲ್ಯ ಸಂಪತ್ತನ್ನು ರಕ್ಷಿಸಲು ರಾಜ ಮಾರ್ತಂಡ ವರ್ಮ ಅತ್ಯಂತ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅನಂತ ಪದ್ಮನಾಭನಿಗಾಗಿಯೇ ವಿಶೇಷ ಅಂಗರಕ್ಷಕ ಪಡೆ ನಿರ್ಮಾಣವಾಗುತ್ತದೆ. ಇವರೆಲ್ಲ ಕಠಿಣ ತರಬೇತಿಯಲ್ಲಿ ಉತ್ತೀರ್ಣರಾದವರು. ದಿನದ ಇಪ್ಪತ್ನಾಲ್ಕು ಗಂಟೆಯೂ ಪಾಳಿಯಲ್ಲಿ ಈ ಪಡೆಯ ಕಾವಲಿರುತ್ತದೆ. ಇಂದಿಗೂ ಈ ಪಡೆ ಅಸ್ತಿತ್ವವಿದೆ. ಇವರೇ ದೇಗುಲದ ಸಮಸ್ತ ಆಸ್ತಿಯನ್ನು ರಕ್ಷಿಸಿಕೊಂಡು ಬಂದ ಅನಂತನ ಅಂಗರಕ್ಷಕರು ,,,,!
ದೇಶಕ್ಕೆ ಸ್ವಾತಂತ್ರ ಬಂದ ತರುವಾಯ ಭಾರತ ಸರಕಾರದೊಡನೆ ಆದ ಒಪ್ಪಂದದಂತೆ ಅನಂತ ಪದ್ಮನಾಭ ದೇಗುಲದ ನಿರ್ವಹಣಾಧಿಕಾರ ರಾಜ ಮನೆತನದಲ್ಲಿಯೇ ಉಳಿಯುತ್ತದೆ. ಕೇರಳದ ದಕ್ಷಿಣ ಭಾಗಗಳ ಮುಖ್ಯ ದೇಗುಲಗಳ ಆಡಳಿತ ನಿರ್ವಹಣೆಗಾಗಿ ರಾಜ್ಯ ಸರಕಾರ ‘ಟ್ರಾವೆಂಕೂರು ದೇವಸ್ವಂ ಮಂಡಳಿ’ ರಚಿಸಿದೆ. ಆದರೆ ಅನಂತ ಪದ್ಮನಾಭ ದೇಗುಲಕ್ಕೆ ಇದರ ವ್ಯಾಪ್ತಿಯಿಂದ ವಿನಾಯತಿ ನೀಡಲಾಗಿದೆ. ಸ್ವಾತಂತ್ರ ನಂತರದಿಂದ ಈ ಕ್ಷಣದವರೆಗೂ ದೇವರು-ದೇಗುಲ-ಅಮೂಲ್ಯ ಆಸ್ತಿ ರಕ್ಷಣೆಗೆ ಟ್ರಾವೆಂಕೂರು ರಾಜ ಮನೆತನ ನಿಗಾ ವಹಿಸುತ್ತಲೇ ಬಂದಿದೆ.
ಪ್ರತಿ ದಿನ ರಾಜ ಮನೆತನದ ಸದಸ್ಯರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಈ ಸಮಯದಲ್ಲಿ ಇತರ ಭಕ್ತಾಧಿಗಳಿಗೆ ಪ್ರವೇಶವಿಲ್ಲ. ರಾಜ ಮನೆತನದ ಪ್ರಮುಖ ಸದಸ್ಯರು ತೆರಳಿದ ನಂತರ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಅನಂತ ಪದ್ಮನಾಭನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಯಾವುದೇ ಟಿಕೇಟುಗಳಿಲ್ಲ. ಬಡವರು-ಬಲ್ಲಿದರೆಲ್ಲರಿಗೂ ಸಮಾನ ರೀತಿಯಲ್ಲಿ ಕಾಣಲಾಗುತ್ತದೆ. ಅಂದರೆ ವಿಶೇಷ ದರ್ಶನಗಳಿಲ್ಲ.
ರಾಜ ಮನೆತನದವರು ಕೈಗೊಂಡ ಬಿಗಿ ಕ್ರಮಗಳಲ್ಲಿ ಅಂಗರಕ್ಷಕ ಪಡೆಯನ್ನು ಸಮರ್ಥವಾಗಿರಿಸುವುದು. ಈ ಪಡೆಗೆ ರಾಜ ಮನೆತನದ ಮುಖ್ಯಸ್ಥರ ಕಣ್ಗಾವಲಿನಲ್ಲಿಯೇ ಆಯ್ಕೆ ನಡೆಯುತ್ತದೆ. ಬಹಳ ಕಟ್ಟುಮಸ್ತು, ಎತ್ತರವಿರುವ ಮತ್ತು ಕೇರಳದ ಪ್ರಾಚೀನ ಸಮರ ಕಲೆ ‘ಕಳರಿ ಪಯಟ್ಟು’ ವಿನಲ್ಲಿ ನುರಿತ ಯುವಕರನ್ನು ಆಯ್ಕೆ ಮಾಡಲಾಗುತ್ತದೆ. ಈ ನಂತರವೂ ವಿಶೇಷ ತರಬೇತಿ ನೀಡಲಾಗುತ್ತದೆ. ಇವರ ಪೂರ್ವಪರಗಳನ್ನು ತಮ್ಮದೇ ಗುಪ್ತಚರ ವ್ಯವಸ್ಥೆಯಿಂದ ಅರಿತ ನಂತರವೇ ನೇಮಕ ಖಾತ್ರಿ ನೀಡಲಾಗುತ್ತದೆ. ಪಡೆಯ ಸದಸ್ಯರಿಗೆ ಆಕರ್ಷಕ ಸಂಬಳ, ಉಚಿತ ವಸತಿ ವ್ಯವಸ್ಥೆಯಿದೆ.
ಪಡೆಗೆ ನುರಿತ ವ್ಯಕ್ತಿ ಮುಖ್ಯಸ್ಥರು. ಇಲ್ಲಿನ ಸದಸ್ಯರು ದೇಗುಲದ ರಿವಾಜಿನಂತೆ ಸೊಂಟಕ್ಕೆ ಬಿಳಿ ಪಂಚೆ ಸುತ್ತಿಕೊಂಡಿರುತ್ತಾರೆ. ಕೈಯಲ್ಲಿ ಕೆಂಬಣ್ಣದ ಹಿತ್ತಾಳೆ ಹಿಡಿಯುಳ್ಳ ದಪ್ಪನೆಯ ದಂಡವಿರುತ್ತದೆ. ನನ್ನ ಅಂದಾಜಿನ ಪ್ರಕಾರ ಇದು ಕಠಾರಿ. ಸಮಯ ಬಂದರೆ ಇದನ್ನವರು ಬಳಸಲು ಹಿಂಜರಿಯುವುದಿಲ್ಲ. ಅತ್ಯಂತ ಗಂಭೀರವಾಗಿರುವ ಇವರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡುತ್ತಾರೆ.
ರಾತ್ರಿ 9 ಗಂಟೆ ನಂತರ ದೇಗುಲದೊಳಗೆ ಈ ಪಡೆಯ ಸದಸ್ಯರನ್ನುಳಿದ ಮಿಕ್ಕಾರಿಗೂ ಪ್ರವೇಶವಿಲ್ಲ. ಬೆಳಿಗ್ಗಿನ ಜಾವ ಮೂರು ಗಂಟೆಗೆ ದೇವರ ದರ್ಶನ ಆರಂಭ. ಇದಕ್ಕೂ ಸ್ವಲ್ಪ ಮೊದಲು ಪಡೆಯವರ ಪಹರೆ-ಅರ್ಚಕರ ಸಮ್ಮುಖದಲ್ಲಿ ಗರ್ಭಗುಡಿ ಪ್ರವೇಶ ದ್ವಾರ ತೆರೆಯಲ್ಪಡುತ್ತದೆ. ನಂತರ ನಿರಂತರವಾಗಿ ದೇವರ ದರ್ಶನವಿರುವುದಿಲ್ಲ. ಪ್ರತಿ ಒಂದೂವರೆಯಿಂದ ಎರಡು ತಾಸಿನ ನಡುವೆ ಅರ್ಧಗಂಟೆಯಿಂದ ಒಂದು ಗಂಟೆ ಕಾಲಾವಧಿ ವಿಶ್ರಾಂತಿ ಇರುತ್ತದೆ. ನಂತರ ರಾತ್ರಿ 9 ರಿಂದ ಬೆಳಗ್ಗಿನ ಜಾವ 2.30ರ ತನಕ ಅನಂತ ಪದ್ಮನಾಭನ ವಿಶ್ರಾಂತಿಗೆ ಯಾರೂ ಭಂಗ ತರುವಂತಿಲ್ಲ.
ಅನಂತ ಪದ್ಮನಾಭನ ಅಮೂಲ್ಯ ಆಸ್ತಿಯನ್ನು ಇಲ್ಲಿಯ ತನಕ ರಕ್ಷಿಸಿಕೊಂಡು ಬಂದಿದ್ದರಲ್ಲಿ ಆತನ ಅಂಗರಕ್ಷಕ ಪಡೆ ಪಾತ್ರವೂ ಹಿರಿದು. ಈ ಪಡೆ ಅಭಿನಂದನೀಯರು. ಇಲ್ಲಿಯ ಆಸ್ತಿಯನ್ನು ರಕ್ಷಿಸಲು ಇವರು ಇಂದಿಗೂ ಸಮರ್ಥರು.
ರೈತ... ಅಮೂಲ್ಯ ಮಾಹಿತಿ ಕಲೆ ಹಾಕಿದಿರಿ....
ReplyDeleteಲೇಖನ ಚನ್ನಾಗಿದೆ....
ದೇಗುಲದ ವಾಸ್ತು... ನೆಲ ಮಾಳಿಗೆ ಬಗ್ಗೆ ಬೀಗ- ಬಾಗಿಲು ಬಗ್ಗೆ ಇನ್ನಷ್ಟು ಮಾಹಿತಿ ಇದ್ರೆ ಕೊಡಿ....
ಸಣ್ಣವರಿದ್ದಾಗ ಏಳು ಕೊಪ್ಪರಿಗೆ ಹೊನ್ನು ಕಾಪಾಡಲು ಏಳು ಹೆಡೆ ಸರ್ಪ ಇತ್ತಂತೆ ಅನ್ನೊ ಕತೆ ನನಪಿಗೆ ಬಂತು...
ಹಾಲಸ್ವಾಮಿ, ಶಿವಮೊಗ್ಗ
good journalism...
ReplyDeleteಸರಕಾರಗಳ ಕಣ್ಣು ಬೀಳಬಾರದು ಅಷ್ಟೇ.. ೯ ಹಡಗು ತುಂಬಿಕೊಂಡು ಬ್ರಿಟಿಷರು ಹೋದ ಮೇಲೆಯೂ, ಇಷ್ಟೊಂದು ಬಾರಿ ಆಫ್ಘನರ ಕೊಳ್ಳೆ - ಕೊಲೆಗಳಾದ ಮೇಲೆಯೂ ನಮ್ಮ ದೇಶದ ಸಂಪತ್ತು ಉಳಿದದ್ದರೆ ಅದು ರಾಜ ಮಹಾರಾಜರ ಜಾಣ್ಮೆಯ ವಾಸ್ತು ಶಿಲ್ಪಿ ಪ್ರಜ್ಞೆಯ ಉಪಯೋಗದಿಂದ ಹಾಗು ನಿಷ್ಠೆಯ ಭಕ್ತ ವೃಂದದಿಂದ.. ಇದನ್ನೂ ಕಿತ್ತು, ತಿರುಪತಿ ಕಾಸು ಊರೆಲ್ಲ ಹಂಚಿದ ಹಾಗೆ ಮಾಡದೆ ಇರಲಿ..
ReplyDeleteshakuntala nivu heliddu sari...devastanada duddu origella hanchodu beda....bhaktaru kottidu aa devarige anta...aa devarige irali...
ReplyDeleteನಿಮ್ಮ ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದ ಕುಮಾರ ರೈತ......
ReplyDeleteNice informative article, loved it,,,thanks
ReplyDelete81/2 ಮಂದಿ ಸದಸ್ಯರಿದ್ದ ಸಮಿತಿ..." ಈ ವಾಕ್ಯದಲ್ಲಿ ’81/2’ ಅಂದ್ರೆ ಹೇಗೆ ಅಂತ ಅರ್ಥ ಆಗಲಿಲ್ಲ ಕುಮಾರ ಅವರೆ...
ReplyDeleteಅಚ್ಚಾ. ಥ್ಯಾಂಕ್ಸ್. :)
ReplyDeletenimma maahiti sangraha mattu vivarane dhaaravahiyante kutoohala bharitavaagide. mundina kantige kaayutiddeve. dhanyavaadagalu nimage.
ReplyDeleteತಿರು ಅನಂತ ಪದ್ಮನಾಭ ದೇಗುಲದ ಇತಿಹಾಸ ಮತ್ತಷ್ಟು ರೋಚಕ. ಮುಂದಿನ ದಿನಗಳಲ್ಲಿ ಅದನ್ನೆಲ್ಲ ಬರೆಯಲು ಪ್ರಯತ್ನಿಸುತ್ತೇನೆ
ReplyDeleteಖಂಡಿತ ಬರೆಯಿರಿ. ಉಪಯುಕ್ತ ಬರಹಗಳು ನಿಮ್ಮವು.
ReplyDeleteK Raitaravare lekhana upyuktate mattu adare, e mahitiyanna jana samyanrige tilisiddu olleyadu.
ReplyDeleteaadre bere yavude dushta shaktigalu kannu e sampattina mele biddu halgade kapadali endu Anantha shayanalli bedike.
Visha manyate patta dorakali.
good posting its really informative
ReplyDeletedevaru astella itkond enumaduthe, bere enu beda ha urannadaru improve madbaudalva alli esto janakke kudiyalu nirilla, tinnalu annavilla, udalu battehilla idarindadaru ellarigu ella saulabyakalpisabaudalva
ReplyDeleteVery interesting & informative
ReplyDeleteNice ....Thank U......
ReplyDeletehey really informative writing, keep it up :-)
ReplyDeletethumba chenagide sir esto vishyagalu gotagidave e lekanadinda thumba tks sir
ReplyDelete