• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

'ಅಣ್ಣಾ' ಬೆಂಬಲಕ್ಕೆ ಕಾಲೇಜು ವಿದ್ಯಾರ್ಥಿಗಳು.....

ಇತ್ತೀಚಿನ ವರ್ಷಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆದ ಚಳವಳಿ ಇಲ್ಲವೇಇಲ್ಲ ಎನ್ನಬಹುದು. ಈ ಕೊರತೆಯನ್ನು 'ಜನ ಲೋಕಪಾಲ್' ಮಸೂದೆಗಾಗಿ ಒತ್ತಾಯಿಸಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಸಾಗುತ್ತಿರುವ 'ಆಂದೋಲನ' ನೀಗಿಸಿದೆ. ಪಿಯುಸಿಯಿಂದ ಹಿಡಿದು ಸ್ವಾತಕೋತ್ತರ ಹಂತದ ವಿದ್ಯಾರ್ಥಿಗಳೆಲ್ಲ ಮಸೂದೆ ಜಾರಿಗೆ ಆಗ್ರಹಿಸುತ್ತಿದ್ದಾರೆ. ದೇಶದೆಲ್ಲೆಡೆ ಈ ವರ್ಗದಿಂದ ವ್ಯಕ್ತವಾಗುತ್ತಿರುವ ಬೆಂಬಲ ಮೇಲ್ನೋಟ್ಟಕ್ಕೆ ಸಮೂಹಸನ್ನಿಯಂತೆ ಕಾಣುತ್ತದಾದರೂ ಸ್ವತಃ ಭ್ರಷ್ಟರಾಗದ ವಿದ್ಯಾರ್ಥಿ ಸಮೂಹ ಈ ಮಸೂದೆ ನೆಪದಿಂದಲಾದರೂ ರಾಷ್ಟ್ರದೆಡೆಗೆ ಚಿಂತನಾರ್ಹ ದೃಷ್ಟಿ ಬೀರುವಂತಾದರೆ ಮುಂದಿನ ದಶಕಗಳ ಭವಿಷ್ಯ ಖಂಡಿತವಾಗಿಯೂ ಆಶಾದಾಯಕವಾಗಿರುತ್ತದೆ.

ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ  ಧರಣಿ-ಸತ್ಯಾಗ್ರಹ ನಡೆಯುತ್ತಿದೆ. ಸ್ಥಳಕ್ಕೆ ಪ್ರತಿದಿನವೂ ಸಾವಿರಾರು ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಇವರಲ್ಲಿ ಕೆಲವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸತೊಡಗಿದರೆ ಮತ್ತೆ ಕೆಲವರು ಸ್ವತಃ ಧರಣಿ ನಿರತರಾಗುತ್ತಿದ್ದಾರೆ. ಇವೆರಡೂ ವಿಭಾಗಗಲ್ಲಿ ಇಲ್ಲದವರು ಜಾಥಾಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭಗಳಲ್ಲಿ ತೆಗೆದ ಚಿತ್ರಗಳು ಇಲ್ಲಿವೆ.


1 comment: