• ಮುಖಪುಟ
  • ಸಿನಿಮಾ
  • ದೇಗುಲ ಸರಣಿ
  • ರಾಜಕೀಯ
  • ಭಾಷೆ
  • ಸಾಹಿತ್ಯ
  • ಪರಿಸರ
  • ರಂಗ ಕಲೆ
  • ಮಾಧ್ಯಮ
  • ಪ್ರವಾಸ
  • ಜೀವನಶೈಲಿ
  • ನನ್ನ ಬಗ್ಗೆ
  • ಸಂಪರ್ಕಿಸಿ

ರಾಹುಲ್ ಮಾತಿನಲ್ಲಿ ತಪ್ಪಿದೆಯೆ…?

ಸಂಸತ್ತಿನಲ್ಲಿ ‘ಲೋಕಪಾಲ್’ ಕುರಿತು ತಮ್ಮ ಅಭಿಪ್ರಾಯಗಳನ್ನು ರಾಹುಲ್ ಗಾಂಧಿ ಮುಕ್ತವಾಗಿ ಮಂಡಿಸಿದ್ದಾರೆ. ಗಂಭೀರ ಚರ್ಚೆಗೆ ಆಸ್ಪದ ನೀಡುವಂಥ ವಿಚಾರಗಳು ಇಲ್ಲಿವೆ. ಆದರೆ ಇದಕ್ಕೆ ಅಣ್ಣಾ ತಂಡ ಸ್ಪಂದಿಸಿರುವ ರೀತಿ ಕಳವಳಕಾರಿ. ರಾಹುಲ್ ಗಾಂಧಿ ಅವರನ್ನು ಭೇವಕೂಫ್ ಎಂದು ಜರಿಯಲಾಗಿದೆ. ತಾವು ಹೇಳಿದ್ದೆ ಅಂತಿಮ. ಇದಕ್ಕೆ ಯಾರೂ ಮರುಮಾತನಾಡದೆ ಒಪ್ಪಬೇಕು ಎಂಬ ಧೋರಣೆ ಪ್ರಜಾತಂತ್ರಕ್ಕೆ ಅಪಾಯಕಾರಿ. ಇಂಥ ನಿಲುವನ್ನು ಅಣ್ಣಾ ತಂಡ ಪ್ರದರ್ಶಿಸುತ್ತಿರುವುದು ಸರಿಯೆ…?

ಆಗಸ್ಟ್ 26ರಂದು ಸಂಸತ್ತಿನ ಶೂನ್ಯವೇಳೆಯಲ್ಲಿ ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಸಮಸ್ಯೆಯ ಆಳಕ್ಕೆ ಪಾತಾಳ ಗಾರುಡಿ ಹಾಕಿನೋಡುವಂಥ ವಿಚಾರ ಹೊರಹೊಮ್ಮಬಹುದೆಂದು ವಿಪಕ್ಷಗಳಿಗೆ ಅನಿಸಿರಲಾರದು. ಏಕೆಂದರೆ ಸಂಸತ್ತಿನ ಹೊರಗೆ-ಒಳಗೆ ಲೋಕಪಾಲ್ ಬಗ್ಗೆ ರಾಹುಲ್ ಗಾಂಧಿ ಮೂರ್ನಾಲ್ಕು ಪುಟಗಳಷ್ಟಿದ್ದ ಭಾಷಣದ ಪ್ರತಿ ಹಿಡಿದು ಓದಲು ನಿಂತಿದ್ದು ಇದೇ ಮೊದಲು. ಈ ಕಾರಣಕ್ಕಾಗಿಯೂ ಹೇಳಿಕೆ ಏನಿರಬಹುದು ಎಂಬ ಕುತೂಹಲವಿತ್ತು.  ನಿರಾಶೆಯೇನೂ ಆಗಲಿಲ್ಲ. ಸಂಸತ್ತಿನಲ್ಲಿ ಯುವ ರಾಜಕಾರಣಿಯ ವಿಚಾರಗಳನ್ನು  ಅರಿಯುವುದಕ್ಕೆ ಆಸ್ಪದವಾಯಿತು.
ರಾಹುಲ್ ಗಾಂಧಿ ಅವರ ಭಾಷಣದ ಸಾರಾಂಶ ವಾಸ್ತವಕ್ಕೆ ಕನ್ನಡಿ ಹಿಡಿದಿತ್ತು. ‘ಲೋಕಪಾಲ್ ಸಂಸ್ಥೆ ಒಂದರಿಂದಲೇ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇದಕ್ಕಾಗಿ ಅತಿ ಪರಿಣಾಮಕಾರಿ ಕಾನೂನು ರಚನೆಯಾಗಬೇಕು. ಮುಖ್ಯವಾಗಿ ಭ್ರಷ್ಟಾಚಾರ ನಿರ್ಮೂಲನೆ, ರಾಜಕೀಯ ಪಕ್ಷಗಳ ಆದ್ಯತಾ ಕಾರ್ಯಕ್ರಮವಾಗಬೇಕು. ಇದಕ್ಕೆ ಎಲ್ಲ ಸ್ತರಗಳಿಂದಲೂ ಬೆಂಬಲ ದೊರೆಯಬೇಕು. ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ಕಟಿಬದ್ಧತೆಯಿರಬೇಕು.

ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು…?

ಭ್ರಷ್ಟಾಚಾರ ನಿರ್ಮೂಲನೆಗೆ ಸರಳ-ಸುಲಭ ಸೂತ್ರವಿಲ್ಲ. ಒಂದೇ ಒಂದು ಮಸೂದೆ ರಾಷ್ಟ್ರದಲ್ಲಿನ ಭ್ರಷ್ಟಚಾರ ನಿರ್ಮೂಲನೆ ಮಾಡಿಬಿಡುತ್ತದೆ. ಭ್ರಷ್ಟಚಾರ ಮುಕ್ತ ಸಮಾಜ ಸೃಷ್ಟಿಯಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನನಗೆ ಗಂಭೀರ ಸಂದೇಹವಿದೆ. ಒಂದು ವೇಳೆ ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು’ ಲೋಕಪಾಲ್ ಸಂಸ್ಥೆ ಯಾರಿಗೆ ಉತ್ತರದಾಯಿ ಆಗಿರಬೇಕು..? ಸ್ವಾಯತ್ತ ಚುನಾವಣಾ ಆಯೋಗದಂತೆ ಲೋಕಪಾಲ್ ಸಂಸ್ಥೆ ರಚಿಸಿ ಸಂಸತ್ತಿಗೆ ಉತ್ತರದಾಯಿ ಆಗಿರುವಂತೆ ಮಾಡಬೇಕು.

ಚುನಾವಣೆಗಾಗಿ ರಾಜಕೀಯ ಪಕ್ಷಗಳಿಗೆ ಸರಕಾರಿ ಸಹಾಯ ಧನ, ಸಾರ್ವಜನಿಕ ಆಡಳಿದಲ್ಲಿ ಪಾರದರ್ಶಕತೆ, ಭೂ ವ್ಯವಹಾರ-ಗಣಿಗಾರಿಕೆಯಂಥ ಉದ್ಯಮಗಳ ಮೇಲೆ ಸೂಕ್ತ ನಿಯಂತ್ರಣ, ಕಾಲನುಕಾಲಕ್ಕೆ ತೆರಿಗೆ ಪರಾಮರ್ಶೆ, ವೃದ್ಧಾಪ್ಯ ವೇತನ, ಸಾರ್ವಜನಿಕ ಪಡಿತರ ವಿಷಯಗಳ ಸಮರ್ಪಕ ನಿರ್ವಹಣೆ.

ಇಂಡಿಯಾದ ದೊಡ್ಡ ಸಾಧನೆಯೆಂದರೆ ಪ್ರಜಾಪ್ರಭುತ್ವ. ಹೊಸ ರಕ್ತ (ಯುವಕರು) ರಾಜಕೀಯಕ್ಕೆ-ಸಂಸತ್ತಿಗೆ ಬರಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಚ್ಚಿರುವ ತಮ್ಮ ಬಾಗಿಲುಗಳನ್ನು ತೆರೆಯಬೇಕು. ಇಂಥ ಬೆಳವಳಿಗೆಗಳು ತಳ ಸ್ತರದಲ್ಲಿಯೂ ಪ್ರಜಾಪ್ರಭುತ್ವವನ್ನು ಗಟ್ಟಿಯಾಗಿ ಬೇರೂರಿಸಲು ಸಹಾಯಕ.

ಇಂದು ಭ್ರಷ್ಟಚಾರ ವಿರೋಧಿ ಮಸೂದೆಗಾಗಿ ಒತ್ತಡ, ನಾಳೆ ಮತ್ತೊಂದು ಮಗದೊಂದು ವಿಷಯಕ್ಕೆ ಒತ್ತಡ ಉಂಟಾಗುತ್ತಲೇ ಇರಬಹುದು. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ‘

ರಾಹುಲ್ ಗಾಂಧಿ ಹೇಳಿಕೆಗಳ ಸಾರಾಂಶವಿದು. ಇದು ಕ್ರಮಬದ್ಧವಾಗಿಲ್ಲ. ನನ್ನ ನೆನಪಿಗೆ ಬಂದ ರೀತಿ ಕೆಲವು ಅಂಶಗಳನ್ನು ಇಲ್ಲಿ ನಮೂದಿಸಿದ್ದೇನೆ. ಮುಖ್ಯವಾಗಿ ಇಲ್ಲಿ ನಾವು ಗಮನಿಸಬೇಕಿರುವುದು ಲೋಕಪಾಲ್ ಉತ್ತರದಾಯಿತ್ವದ ಬಗ್ಗೆ. ಬಲಿಷ್ಠ ಸಂಸ್ಥೆಯೊಂದು ಸಂಸತ್ತಿಗೆ  ಉತ್ತರದಾಯಿ ಅಲ್ಲವೆಂದರೆ ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಗೆ ಕಂಟಕಕಾರಿಯಾಗಲೂಬಹುದು. ಒಂದು ವೇಳೆ ಇಂಥ ಲೋಕಪಾಲ್ ಸಂಸ್ಥೆಯೆ ಭ್ರಷ್ಟವಾದರೆ ಗತಿಯೇನು ಎಂಬ ರಾಹುಲ್ ಆತಂಕವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ರಾಷ್ಟ್ರದಲ್ಲಿ ಬೇರುಬಿಟ್ಟಿರುವ ಭ್ರಷ್ಟಚಾರ ನಿರ್ಮೂಲನೆಗೆ ಲೋಕಪಾಲ್ ಮಸೂದೆ ಮಂತ್ರದಂಡವಾಗಲು ಸಾಧ್ಯವಿಲ್ಲ. ಸಮಸ್ಯೆ ತುಂಬ ಸಂಕೀರ್ಣವಾಗಿದೆ. ಮುಖ್ಯವಾಗಿ ಚುನಾವಣ ವ್ಯವಸ್ಥೆ. ಈ ನಿಟ್ಟಿನಲ್ಲಿ ರಾಹುಲ್ ಸಲಹೆ ಸ್ವಾಗತಾರ್ಹ. ಇವೆಲ್ಲದರ ಜೊತೆಗೆ ಭ್ರಷ್ಟವಾಗದ ಯುವ ಸಮೂಹ ಸಕ್ರಿಯ ರಾಜಕೀಯಕ್ಕೆ ಬರಬೇಕಿದೆ. ಶಾಸನ ಸಭೆಗಳಿಗೂ ಪ್ರವೇಶ ಮಾಡಬೇಕಿದೆ. ಈ ದಿಶೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮುಕ್ತವಾಗಿದಷ್ಟು ಉತ್ತಮ.
 
ಭಾರತದ ದೊಡ್ಡ ಸುಂದರತೆಯೆ ಪ್ರಜಾಪ್ರಭುತ್ವ. ಏಕಮುಖ ಧೋರಣೆಗಳು-ಚರ್ಚೆಗೆ ಆಸ್ಪದ ನೀಡದ ಒತ್ತಡಗಳು ಇಂಥ ವ್ಯವಸ್ಥೆಗೆ ಅಪಾಯಕಾರಿ. ಈ ನಿಟ್ಟಿನಲ್ಲಿ ಚರ್ಚೆಗಳಾಗಿ ಬಲಿಷ್ಠವಾದ ಮತ್ತು ಸಂಸತ್ತಿಗೆ ಸದಾ ಉತ್ತರದಾಯಿ ಆಗಿರಬೇಕಾದ ಮಸೂದೆ ರಚನೆ; ತನ್ಮೂಲಕ ‘ಲೋಕಪಾಲ್’ ಸಂಸ್ಥೆ ಉದಯವಾಗಬೇಕು. ಆದರೆ ಇದಕ್ಕೆ ತದ್ವಿರುದ್ಧವಾಗಿ ಆಗುತ್ತಿರುವ ಬೆಳವಣಿಗೆ ಕಳವಳಕಾರಿ. ಇಂದು ರಾತ್ರಿ(ಆಗಸ್ಟ್ 26)ಯೊಳಗೆ ಚರ್ಚೆ ಮುಗಿಯಬೇಕು. ಮಸೂದೆಗೆ ಅಂಕಿತ ಬೇಳಲೇಬೇಕು. ಇಲ್ಲದಿದ್ದರೆ ಪರಿಸ್ಥಿತಿ ಸರಿಯಾಗುವುದಿಲ್ಲ ಎಂದು ಕಿರಣ್ ಬೇಡಿ ಹೇಳುತ್ತಾರೆ. ಅಣ್ಣಾ ಹಜಾರೆ ಅವರ ದೇಹಾರೋಗ್ಯ ವಿಷಯವನ್ನು ಮುಂದಿಟ್ಟುಕೊಂಡು ಸಂಸತ್ತಿನ ಮೇಲೆ ನಕಾರಾತ್ಮಕ ಒತ್ತಡ ಹಾಕಲು ಯತ್ನಿಸುತ್ತಾರೆ.

ಇನ್ನು ಅಣ್ಣಾ ತಂಡದ ಮತ್ತೋರ್ವ ಪ್ರಮುಖ ಸದಸ್ಯ ಪ್ರಶಾಂತ್ ಭೂಷಣ್ , ಚರ್ಚೆಗೆ ಆಸ್ಪದ ನೀಡುವಂಥ ಭಾಷಣ ಮಾಡಿದ ರಾಹುಲ್ ಗಾಂಧಿ ಅವರನ್ನು ಭೇವಕೂಫ್ ಎಂದು ಹೀಯಾಳಿಸುತ್ತಾರೆ. ಅರವಿಂದ್ ಕೇಜ್ರಿವಾಲ್ ಅಂತೂ ಮಾಧ್ಯಮಗಳು ಯಾವ ರೀತಿ ವರದಿ ಮಾಡಬೇಕು ಎಂಬುದನ್ನು ಪಾಠ ಮಾಡುತ್ತಾರೆ. ಈ ಸಂದರ್ಭದಲ್ಲಿ ಇವರ ಮಾತು-ಅಂಗಿಕ ಭಾಷೆ ಆಕ್ಷೇಪಾರ್ಹವಾಗಿತ್ತು. ಇದನ್ನು ಮಾಧ್ಯಮಗಳು ಪ್ರಶ್ನಿಸುವುದು ಸೂಕ್ತವಾಗಿತ್ತು.

 ನಿಜ. ಬಲಿಷ್ಠ ಲೋಕಪಾಲ್ ಅತ್ಯವಶ್ಯಕ. ಆದರೆ ಸಂಸತ್ತಿಗೆ ಪರ್ಯಾಯವಾದ ಲೋಕಪಾಲ್ ಬೇಕಿಲ್ಲ. ಇಂಥ ವ್ಯವಸ್ಥೆ ಎಂದಿಗೂ ಪ್ರಜಾತಂತ್ರಕ್ಕೆ ಕಂಟಕಕಾರಿ.

6 comments:

  1. Anna team avara pbm ennandre taavu heliddu ivatte agbeku annodu...Idenu sanna vishya alla eegle agbekunta helakke...Public pressure tandu olle kelsa madiddare...Innu Parliamentge avara kelsa madakke bittre olledu....Santosh Hegde, Swami Agnivesh muntada halavu ganyaru kooda idee maatanna heliddare...

    ReplyDelete
  2. Dhananjaya KulkarniSaturday, 27 August, 2011

    ಭೃಷ್ಟಾಚಾರವನ್ನು ನಾವೆಲ್ಲ ವಿರೋಧಿಸೋಣ, ಆದರೆ ಅಣ್ಣಾ ಹಜಾರೆ ಹಾಗೂ ಅವರ ತಂಡದವರು ಮಂಡಿಸುತ್ತಿರುವ ಮಸುದೆಯನ್ನು ಒಪ್ಪಲು ಸಾಧ್ಯವಿಲ್ಲ. ಅವರು ನೇರವಾಗಿ ನಾವು ಪ್ರಜಾತಂತ್ರವನ್ನು ಒಪ್ಪುವುದಿಲ್ಲ, ಎಲ್ಲದಕ್ಕೂ ನಾವೇ ಮಂಚೂಣಿಯಲ್ಲಿರುತ್ತೇವೆ ಎಂಬ ವಾದ ಒಪ್ಪತಕ್ಕುದಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜಾತಂತ್ರದಲ್ಲಿರುವ ನ್ಯಾಯಾಂಗ, ಶಾಸಕಾಂಗ ಮತ್ತು ರಾಜ್ಯಾಂಗಗಳು ಸಂವಿಧಾನಬದ್ಧವಾಗಿ ನಿರ್ಧರಿಸಲ್ಪಟ್ಟಂತಹವುಗಳು. ಅವುಗಳನ್ನೇ ಧಿಕ್ಕರಿಸಿ, ತಾವು ಹೇಳಿದ್ದೇ ಸತ್ಯ ಎನ್ನುವಂತಹ ಅಣ್ಣಾ ತಂಡದ ಧೋರಣೆಯನ್ನು ನೋಡಿದಾಗ, ನಮಗೆ ಯಾಕೋ ಈ ರಾಜಕಾರಣಿಗಳಂತೆ ಅವರ ಮೇಲೂ ಸಹ ಗುಮಾನಿ ಶುರುವಾಗಿದೆ. ಇದು ಮೊಂಡುತನದ ಪರಮಾವಧಿ...

    ReplyDelete
  3. ಒಟ್ಟಿನಲ್ಲಿ ಲೋಕಪಾಲ್-ಜನಲೋಕಪಾಲ್ ಬಗ್ಗೆ ಎದ್ದಿರೋ ಪ್ರಶ್ನೆಗಳು ಮತ್ತೆ ಈ ದೇಶದ ಜನರನ್ನು ದಿಕ್ಕುತಪ್ಪಿಸೋ ನಿಟ್ಟಿನಲ್ಲಿ ನಡಿತಿರೋ ಗಿಮಿಕ್ ಗಳು ಅಂತನ್ನಬಹುದು ಯಾಕೆಂದರೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಯುವ ಪದ್ಧತಿಗೆ ಜೋತುಬಿದ್ದಿರುವ 'ಕೈ'ಕಾಲು, ಹೊಟ್ಟೆ ಮತ್ತು 'ತಲೆ' ಮಂದಿಗೆ ಏನಂತ ಹೇಳಬೇಕು ? ಬ್ರಷ್ಟಾಚಾರ ತಡೆಯಲು ಮಾಡುವ ಕಾಯ್ದೆಯನ್ನು ದುರುಪಯೋಗ ಮಾಡಿಕೊಳ್ತಾರೆ ಅಂತ್ಹೇಳಿ ರಾಹು'ಲ ಹೇಳಿದರೆ ಉಳಿದವರ ವಾದ 1ಒಂದು ಥರಾ ಒಟ್ಟಿನಲ್ಲಿ ಅಯೋಮಯ ಪರಿಸ್ಥಿತಿಗೆ ಒಂದೇ ಪರಿಹಾರ ಅಂದರೆ ಕಠಿಣ ಕಾನೂನುಗಳನ್ನು ಸರಳೀಕರಣ ಗೊಳಿಸುವುದು ...ಮತ್ತು ಕೆಲ ಸರಳ ಕಾನೂನುಗಳನ್ನು ಕಠಿಣಗೊಳಿಸುವುದು ಜನಲೋಕಪಾಲ ಕಠಿಣವಾಗಿರಲಿ ಉತ್ತರದಾಯಿಯಾಗಿರಲಿ...!

    ReplyDelete
  4. ಮುಗ್ದ ಅಣ್ಣಾನನ್ನು ಮುಂದಿಟ್ಟುಕೊಂಡು ಇವರೆಲ್ಲರೂ ಪ್ರಚಾರಕ್ಕಿಳಿದಿದ್ದಾರೆ. ಕಿರಣ್ ಬೇಡಿ ಅಂಥದ್ದೇ ಭ್ರಷ್ಟ ವ್ಯವಸ್ಥೆಗೆ ಕೆಳಗೇ ಕೆಲಸ ಮಾಡಿದವರು, ನಿವೃತ್ತಿಯಾದವರು. ಕಾಳಜಿ ಆಗಲೂ ಇತ್ತೆ? ಶಾಂತಿಭೂಷಣ ಎಂಬ ವ್ಯಕ್ತಿಗೆ ವೃತ್ತಿ ಪದ್ಧತೆ ಇದೆಯೇ?

    ReplyDelete
  5. Rahul Gandhi and his family have been ruling this country from more than 6 decades.. They are responsible for all these corruption in country, so no importance should be given for his words..

    ReplyDelete
  6. brashtaachaara nirmoolane lokapal ninda jaari yaada kshanadindale aagutte antha Anna Hazare helilla...brashtaachaara tadeyalu idu namma modala hejje...nimma blog nodidre sarkaarakke samaya brashtaachaara niyantrisalu samaya kotte illa anno haagide 65yrs en maadidru eee rajakaaranigalu. Anna Hazare yavaru helida mele na sarkaarakke brashtachaarada bagge goth aagiddu? Isht dina kaadiddeve innu saaku ' enough is enough' anta sarkaarada mele ottada herodralli tappenide? ishtakku Jan Lokpal bill sarkaara Parliment nalli mandisteve antha helodikke karana namma Anna team and their supporters i.e all of us. Sarkaara da dhoranege inmunde ide reethiya uttara naavugalu kotre avru kelsa maadthaare illa andre nammanna maaribidthaare!

    ReplyDelete