ಋಷಿ ಸದೃಶ್ಯ ಸಾಧನೆ ಮಾಡಿದ ಕೃಪಾಕರ ಮತ್ತು ಸೇನಾನಿ
ವನ್ಯಜೀವಿಗಳ ಬಗ್ಗೆ ಅಧ್ಯಯನ ಮಾಡುವುದು ಒಂದು ಸವಾಲು. ಅದರಲ್ಲಿಯೂ ಒಂದು ನಿರ್ದಿಷ್ಟ ವರ್ಗದ ಪ್ರಾಣಿಯ ಮೇಲೆ ೧೭ ವರ್ಷಗಳ ನಿರಂತರ ಅವಲೋಕನ ಮತ್ತು ಅಧ್ಯಯನ ಕಠಿಣ ತಪ್ಪಸ್ಸು. ಇಂಥ ಸಾಧನೆ ಮಾಡಿದವರು ಕೃಪಾಕರ ಮತ್ತು ಸೇನಾನಿ. ಇವರ ಅಗಾಧ ಪರಿಶ್ರಮದ ಪರಿಣಾಮ ಇವರು ಕೆನ್ನಾಯಿಗಳ ಜೀವನಗಾಥೆ ಕುರಿತು ಚಿತ್ರೀಕರಿಸಿದ ' ದಿ ಪ್ಯಾಕ್ ' ವನ್ಯಜೀವಿ ಡಾಕ್ಯುಮೆಂಟರಿಗೆ 'ಗ್ರೀನ್ ಆಸ್ಕರ್' ಪುರಸ್ಕಾರ ಲಭಿಸಿದೆ. ಕಾಡಿನ ಜೀವಿಗಳ ಸೂಕ್ಷ್ಮ ಜೀವನ ವಿವರಿಸುವ ಡಾಕ್ಯುಮೆಂಟರಿಗೆ ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿಯಿದು. ಇಂಥ ಗೌರವ ಪಡೆಯುವುದು ಸುಲಭವಲ್ಲ. ವಿಶ್ವದ ನಾನಾ ದೇಶಗಳ ವನ್ಯಜೀವಿ ಅಧ್ಯಯನಕಾರರು ಈ ಪ್ರಶಸ್ತಿಗೆ ತಮ್ಮ ಚಿತ್ರಗಳನ್ನು ಕಳುಯಿಸುತ್ತಾರೆ. ೨೦೧೦ರಲ್ಲಿ ಪ್ರಶಸ್ತಿ ಪಡೆಯಲು ಸ್ಪರ್ಧೆಗೆ ಬಂದ ಚಿತ್ರಗಳ ಸಂಖ್ಯೆ ೪೪೬ !. ಇದರಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಳ ಸಂಖ್ಯೆ ೬೦. ಇವುಗಳಲ್ಲಿ ತೀರ್ಪುಗಾರರ ತೀವ್ರ ಮೆಚ್ಚುಗೆ ಪಡೆದಿದ್ದು 'ದಿ ಪ್ಯಾಕ್' ಸ್ವರ್ಧೆಗೆ ಬಂದಿದ್ದ ವಿವಿಧ ದೇಶಗಳ ವನ್ಯಜೀವಿ ಅಧ್ಯಯನಕಾರರಿಂದಲೂ ಮುಕ್ತಕಂಠದ ಪ್ರಶಂಸೆಗೆ ಈ ಚಿತ್ರ ಒಳಗಾಗಿದೆ. ಇಂಥ ಅಪೂರ್ವ ಸಾಧನೆ ಮಾಡಿದ 'ಒಂದೇ ಆತ್ಮ ಎರಡು ದೇಹ' ಎಂಬಂತಿರುವ ಕೃಪಾಕರ ಮತ್ತು ಸೇನಾನಿ ಅವರೊಂದಿಗೆ ಕುಳಿತು ಚಿತ್ರ ವೀಕ್ಷಿಸುವ ಬಳಿಕ ಸಂವಾದಿಸುವ ಕಾರ್ಯಕ್ರಮ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಸೆಪ್ಟೆಂಬರ್ ೩, ೨೦೧೧ರಲ್ಲಿ ನಡೆಯಿತು. 'ಸಂವಾದ ಡಾಟ್ ಕಾಮ್ ಬಳಗದವರು ಇದನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ನಾನು ತೆಗೆದಿರುವ ಚಿತ್ರಗಳು ನಿಮ್ಮ ಮುಂದಿವೆ.
|
krupaakara senaani avara saadhane ananya. avaru thegeda chaayaachitragalannoo prakatisi
ReplyDelete