ಚಿತ್ರೀಕರಣ ಆರಂಭಕ್ಕೆ ಮುಂಚಿತವಾಗಿ ಮತ್ತು ನಂತರ ಭಾರಿ ಪ್ರಚಾರ ಪಡೆದ ಚಿತ್ರ ‘ಡರ್ಟಿ ಪಿಕ್ಚರ್’ ಇದಕ್ಕೆ ಮೊದಲ ಕಾರಣ ಇದರ ಕಥೆ ಮಾದಕ ನಟಿ; ದುರಂತ ಅಂತ್ಯ ಕಂಡ ಸಿಲ್ಕ್ ಸ್ಮಿತಾ ಜೀವನಗಾಥೆ ಆಧರಿಸಿದೆ ಎಂಬುದು. ಎರಡನೇಯದು ಸೌಮ್ಯ ಪಾತ್ರಗಳಿಂದಲೇ ಹೆಸರು ಮಾಡಿದ ವಿದ್ಯಾ ಬಾಲನ್ ಕಥಾನಾಯಕಿಯಾಗಲು ಒಪ್ಪಿ ಅಭಿನಯಿಸಲು ಶುರು ಮಾಡಿದ್ದು. ನಂತರದ ದಿನಗಳಲ್ಲಿ ಚಿತ್ರಕ್ಕಿಟ್ಟ ಹೆಸರು. ಇವೆಲ್ಲ ಫಿಲ್ಮ್ ಹೇಗೆ ಪ್ರೆಸೆಂಟ್ ಆಗಬಹುದು ಎಂಬ ಬಗ್ಗೆ ಮೂಡಿಸಿದ್ದ ಅಪಾರ ಕುತೂಹಲ. ಆದರೆ ಇಷ್ಟೆಲ್ಲ ನಿರೀಕ್ಷೆ ಮಟ್ಟವನ್ನು ಸಿನಿಮಾ ಮುಟ್ಟಿದೆಯೇ….? ದೀಪದ ಬೆಳಕಿಗೆ ಆಕರ್ಷಿತವಾಗಿ ಉರಿದುಹೋಗುವ ಪತಂಗದ ಬದುಕಿನಂತಾದ ಸಿಲ್ಕ್ ಸ್ಮಿತಾಳ ತಲ್ಲಣ-ತಳಮಳ ಸಮರ್ಥವಾಗಿ ಪ್ರತಿಬಿಂಬಿತವಾಗಿದೆಯೇ….?
ಮಾದಕತೆಯೇ ಮೈದಳೆದಂಥ ರೂಪು-ಆಕಾರ ಸಿಲ್ಕ್ ಸ್ಮಿತಾಳದು. ತಾನೇ ಬಯಸಿ ಬಯಸಿ ಸಿನಿಮಾ ನಟಿಯಾದವಳು. ಅದೂ ಸೆಕ್ಸಿ ಪಾತ್ರಗಳು. 80ರ ದಶಕದಲ್ಲಿ ತೆರೆಕಂಡ ಸಾಕಷ್ಟು ತೆಲುಗು-ತಮಿಳು-ಕನ್ನಡ-ಮಲೆಯಾಳಮ್ ಚಿತ್ರಗಳಲ್ಲಿ ಮಾದಕ ಪಾತ್ರ ಅಥವಾ ಕ್ಯಾಬರೆ ಡ್ಯಾನ್ಸ್ ಇರಲೇಬೇಕು ಮತ್ತು ಈ ಪಾತ್ರಗಳನ್ನು ಸಿಲ್ಕ್ ಸ್ಮಿತಾಳೇ ಮಾಡಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಮುಖ್ಯ ಕಾರಣ ಇಂಥ ಪಾತ್ರಗಳನ್ನು ಸಜೀವಗೊಳಿಸುತ್ತಿದ್ದ ಸಿಲ್ಕ್. ಮಾದಕತೆಗೆ ಮತ್ತೊಂದು ಹೆಸರೇ ಸಿಲ್ಕ್ ಎನ್ನುವಂಥ ಆಕರ್ಷಣೆ. ಮುಖ್ಯವಾಗಿ ಈಕೆಯ ಕಣ್ಣೋಟ ನೋಡುಗರನ್ನು ಉದ್ರೇಕಿತಗೊಳಿಸುತ್ತಿದ್ದ ಪರಿ.
ಸಿನಿಮಾ ರಂಗಕ್ಕೆ ಕಾಲಿಡುವುದಕ್ಕೆ ಮುಂಚಿತವಾಗಿ ಜೀವನದಲ್ಲಿ ನೋವು ಅನುಭವಿಸಿದ್ದ ವಿಜಯಲಕ್ಷ್ಮಿ ( ಮೂಲ ಹೆಸರು) ಸಿಲ್ಕ್ ಸ್ಮಿತಾ ಆದ ನಂತರವೂ ಮಾನಸಿಕವಾಗಿ ಸುಖ ಪಡಲೇ ಇಲ್ಲ..! ಸಂತೋಷ-ನೆಮ್ಮದಿ ಎನ್ನವುದು ಈಕೆಗೆ ಮರೀಚಿಕೆಯಾಗಿಯೇ ಉಳಿಯಿತು. ನಟನೆಯಿಂದ ಗಳಿಸಿದ ಖ್ಯಾತಿ-ಹಣ ಈಕೆಯ ಪಾಲಿಗೆ ನಕಾರಾತ್ಮವೇ ಆದವು. ಇವೆಲ್ಲದರಿಂದ ತೀವ್ರ ಖಿನ್ನತೆಗೆ ಜೊತೆಗೆ ಕುಡಿತ-ಸಿಗರೇಟ್ ವ್ಯಸನಕ್ಕೆ ಒಳಗಾದ ಈಕೆ ಮೊರೆ ಹೋಗಿದ್ದು ಸಾವಿಗೆ…!! ಆತ್ಮಹತ್ಯೆ ಮೂಲಕ ಬದುಕು ಕೊನೆಗಾಣಿಸಿಕೊಂಡ ಸಿಲ್ಕ್ ಇಂದಿಗೂ ದಕ್ಷಿಣ ಬಾರತದ ಸಿನಿ ಪ್ರೇಕ್ಷಕರ ನೆನಪಿನಲ್ಲಿ ಹಸಿರಾಗಿಯೇ ಉಳಿದಿದ್ದಾಳೆ. ಇದನ್ನು ನಗದಾಗಿ ಪರಿವರ್ತಿಸಿಕೊಳ್ಳಲು ಯತ್ನಿಸಿದ ಹಿಂದಿ ಚಿತ್ರರಂಗದ ನಿರ್ಮಾಪಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಉತ್ತಮ ಸಿನಿಮಾ ಕೊಡಲು ವಿಫಲರಾಗಿದ್ದಾರೆ.
ರಜತ್ ಆರೋರಾ ಬರೆದ ಚಿತ್ರಕಥೆಯಲ್ಲಿ ಸಿಲ್ಕ್ ಸಂವೇದನೇಯೆ ಕಾಣೆಯಾಗಿದೆ. ಈ ಇಡೀ ಸ್ಕ್ರೀಪ್ಟ್ ಜಾಳುಜಾಳಾಗಿದೆ. ಏನನ್ನು ಹೇಳಬೇಕು ಎಂಬುದರಲ್ಲಿಯೇ ಚಿತ್ರಕಥೆಗಾರ ವಿಫಲವಾಗಿದ್ದಾನೆ. ಇನ್ನು ನಿರ್ದೇಶಕ ಮಿಲನ್ ಲೂಥರಿಯಾ ಬಗ್ಗೆ ಹೇಳುವುದಾದರೆ ಚಿತ್ರ ನೋಡಿದ ನಂತರ ಇದಕ್ಕೊಬ್ಬ ನಿರ್ದೇಶಕ ಇದ್ದಾನೆಯೇ ಎಂಬ ಅನುಮಾನ ಕಾಡುತ್ತದೆ. ಅಕೀವ್ ಅಲಿ ಸಂಕಲನ ಮತ್ತು ಬಾಬಿ ಸಿಂಗ್ ಛಾಯಾಗ್ರಹಣ ಕೂಡ ತೀರಾ ಕಳಪೆ. ವಿಶಾಲ್ ಶೇಖರ್ ನೀಡಿರುವ ಸಂಗೀತ ಕೂಡ ಈ ಮಾತಿಗೆ ಹೊರತಲ್ಲ.
ಪಾತ್ರಗಳಿಗೆ ಹೊಂದಾಣಿಕೆಯಾಗುವ ನಟಿ-ನಟರ ಆಯ್ಕೆಯಲ್ಲಿಯೇ ನಿರ್ದೇಶಕ-ನಿರ್ಮಾಪಕರು ಎಡವಿದ್ದಾರೆ. ಸಿಲ್ಕ್ ಮಾದಕತೆಗೂ ವಿದ್ಯಾ ಬಾಲನ್ ಗೆ ಸಹಜವಾದ ಸಾತ್ವಿಕ ಹೊರ ನೋಟಕ್ಕೂ ಹೊಂದಾಣಿಕೆಯಾಗುವುದಿಲ್ಲ. ಈಕೆಯದು ತುಂಬ ಬಲವಂತದ ನಟನೆ ಎನ್ನವುದು ತಿಳಿಯುತ್ತದೆ. ಇನ್ನು ಸೂರ್ಯಕಾಂತ್ ಪಾತ್ರಧಾರಿ ನಾಸಿರುದ್ದೀನ್ ಶಾ ಮತ್ತು ರಮಾಕಾಂತ್ ಪಾತ್ರಧಾರಿ ತುಷಾರ್ ಕಪೂರ್ ಸಹ ಇದರಿಂದ ಹೊರತಲ್ಲ.
ಈ ಚಿತ್ರ ಅಶ್ಲೀಲವಾಗಿಲ್ಲ. ಆದರೆ ಒಂದು ಉತ್ತಮ ಸಿನಿಮಾ ಎನ್ನುವ ನಿರೀಕ್ಷೆಯಿಂದ ನೋಡಿದಾಗ ಹೆಸರಿಗೆ ತಕ್ಕಂತೆ ಡರ್ಟಿ ಪಿಕ್ಚರ್ !!
ಈ ಸಿನಿಮಾದ ಬಗ್ಗೆ ಇದೇ ಅಭಿಪ್ರಾಯವನ್ನು
ReplyDeleteಇನ್ನೊಂದು ಬ್ಲಾಗ್ನಲ್ಲೂ ಓದಿದ್ದೆ ಸರ್.
ಚೆನ್ನಾಗಿದೆ ವಿಶ್ಲೇಷಣೆ
ಸ್ವರ್ಣ
ಎಲ್ಲಿಯ ಸಿಲ್ಕ್ ಸ್ಮಿತಾ, ಎಲ್ಲಿಯ ವಿದ್ಯಾ ಬಾಲನ್ ! ವಿಮರ್ಶೆ ಸಹಜವಾಗಿ ಬಂದಿದೆ .
ReplyDeleteVidya could play a Madhubala better, not Silk. For that matter, none can play Silk as her self!
ReplyDeleteಆತ್ಮ ಇರದಿದ್ದರೂ ಆನಂದ ಸಿಕ್ತಲ್ಲ, ಅಷ್ಟು ಸಾಕು ಅಂದನಂತೆ ಸಾಮಾನ್ಯ ಪ್ರೇಕ್ಷಕ!
ReplyDeleteಜನರ ಮಾನಸೀಕ ದೌರ್ಬಲ್ಯಗಳಿಗೆ ಪಕ್ಕಾ ಒಂದು ವಸ್ತು ವಿಷಯ ಅಂದರೆ ಹೆಣ್ಣು.ಅದು ಸಿನೇಮಾದಲ್ಲಿ ಓರ್ವ ಹೆಣ್ಣು ಮಗಳ ಸೌಂದರ್ಯವನ್ನು ನಗ್ನವಾಗಿ ಹರಾಜಿಗಿಟ್ಟವರು ಜೊಲ್ಲು ಸುರಿಸಿ ಅವಳ ಹೆಣದ ಮೇಲೆ ನಾಯಿಯ ಹಾಗೆ ಬಿದ್ದಿದ್ದು ಅನ್ನೋದಾದರೆ ಅದಕ್ಕೆ ಅಪ್ಪಟ ನಟಿ ಸಿಲ್ಕ್ ಸ್ಮೀತಾ ಇವರಿಗೆ ಸಿಕ್ಕಿದ್ದು.ಅವಳ ಬದುಕನ್ನು ಮೂರಾಬಟ್ಟೆ ಆಸ್ವಾಧಿಸಿದವರು, ಅವಳ ಮನಸ್ಸನ್ನು ಆಸ್ವಾಧಿಸಲಿಲ್ಲ. ಅವಳ ಅರೆ ಮುಚ್ಚಿದ ದೇಹ ಕಂಡು ನಕ ಉಕ್ಕಿಸಿಕೊಂಡವರು ಅವಳ ಕಣ್ಣೀರು ಒರೆಸಲಿಲ್ಲ. ಸತ್ತ ಮೇಲು ಅವಳ ದೇಹಕ್ಕೆ ನೊಣಗಳಾಗಿದ್ದಾರೆ ನೋಡಿ.ಅದಕ್ಕೆ ವ್ಯಾಪಾರಕ್ಕೆ ಸಿಕ್ಕವಳು ವಿದ್ಯಾ ಬಾಲನ್. ಇದು ಬಳೆ ಸದ್ದಿಗೆ ಕಚ್ಚೆ ಹರಿದ ಸಿನಿಮಾ ಮಂದಿಯ ಕಥೆ.ಚೆನ್ನಾಗಿದೆ ನಿಮ್ಮ ಬರಹ.
ReplyDeleteOnly one sided comments!
ReplyDelete